(ನ್ಯೂಸ್ ಕಡಬ) newskadaba.com ಮಾ. 15. ಬಾರ್ ಮುಂಭಾಗದಲ್ಲಿ ನಿಂತಿದ್ದ ಯುವಕರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ಸುಳ್ಯದ ಶ್ರೀರಾಂಪೇಟೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಚೂರಿ ಇರಿತಕ್ಕೊಳಗಾದ ಯುವಕರನ್ನು ಸುಳ್ಯ ಬೀರಮಂಗಲ ಬಂಗ್ಲಗುಡ್ಡೆ ನಿವಾಸಿಗಳಾದ ಹರೀಶ್ ಬಂಗ್ಲಗುಡ್ಡೆ ಹಾಗೂ ನಿತೇಶ್ ಕೆ.ಆರ್. ಬಂಗ್ಲಗುಡ್ಡೆ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಾದ ಅಜ್ಜಾವರ ಗ್ರಾಮದ ಕಾಂತಮಂಗಲ ಗಂಧದಗುಡ್ಡೆ ನಿವಾಸಿಗಳಾದ ದಯಾನಂದ ಮತ್ತು ರಾಜೇಶ್ ಬಿ.ಆರ್. ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಚೂರಿ ಇರಿತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.








