ದೆಹಲಿ: ಮತ್ತೆ ಅತೀ ಕಳಪೆ ಶ್ರೇಣಿಗೆ ಇಳಿದ ವಾಯುಗುಣಮಟ್ಟ



(ನ್ಯೂಸ್‌ ಕಡಬ)com,ಡಿ.26: ವಾರದ ಆರಂಭದಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದ ದೆಹಲಿಯ ಗಾಳಿಯ ಗುಣಮಟ್ಟ ಶನಿವಾರ ಮತ್ತೆ ಹದಗೆಟ್ಟಿದ್ದು, ನಗರದ ಹಲವಾರು ಭಾಗಗಳು ಮಾಲಿನ್ಯ ಮಟ್ಟವನ್ನು ‘ತುಂಬಾ ಕಳಪೆ’ ಮತ್ತು ‘ತೀವ್ರ’ ವರ್ಗಗಳಲ್ಲಿ ದಾಖಲಿಸಿವೆ. ಇದರಿಂದಾಗಿ ವಾತಾವರಣದಲ್ಲಿ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಂಟಿಗ್ರೇಡ್‌ಗೆ ಸಾಧಾರಣ ಏರಿಕೆಯಾಗಿದೆ. ಸೋಮವಾರದದವರೆಗೆ ತಾಪಮಾನವು 5ರಿಂದ 8 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.





ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ದತ್ತಾಂಶದ ಪ್ರಕಾರ, ಧೌಲಾ ಕುವಾನ್‌ನಲ್ಲಿ ಗಾಳಿಯ ಗುಣಮಟ್ಟವು 252 ರ ವಾಯು ಗುಣಮಟ್ಟ ಸೂಚ್ಯಂಕ (AQI) ನಲ್ಲಿದ್ದು, ‘ಕಳಪೆ’ ಎಂದು ವರ್ಗೀಕರಿಸಲಾಗಿದೆ. ಅಕ್ಷರಧಾಮ ಮತ್ತು ಆನಂದ್ ವಿಹಾರ್‌ನಲ್ಲಿ, ವಾಯು ಗುಣಮಟ್ಟ ಸೂಚ್ಯಂಕ ‘410’ ತಲುಪಿದ್ದು, ಎರಡೂ ಪ್ರದೇಶಗಳನ್ನು ‘ತೀವ್ರ’ ವರ್ಗಕ್ಕೆ ಸೇರಿಸಿದೆ.






ಗುರುವಾರ 234 ಕ್ಕೆ ಹೋಲಿಸಿದರೆ ಶುಕ್ರವಾರ ಸಂಜೆ 4 ಗಂಟೆಗೆ ನಗರದ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 332 ರಷ್ಟಿತ್ತು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ, ವಾಯು ಗುಣಮಟ್ಟ ಸೂಚ್ಯಂಕ 320 ಕ್ಕೆ ದಾಖಲಾಗಿತ್ತು. ಗಾಳಿಯ ವೇಗವು ಕುಂಠಿತವಾಗುತ್ತಿದ್ದಂತೆಯೇ ಅತ್ಯಂತ ದಟ್ಟವಾದ ಮಂಜು ಆವರಿಸಿದೆ.

error: Content is protected !!
Scroll to Top