(ನ್ಯೂಸ್ ಕಡಬ) newskadaba.com ಅ. 13. ಇನ್ಮುಂದೆ ರಾಜ್ಯದಲ್ಲಿ ಪಡಿತ ಚೀಟಿದಾರರಿಗೆ 10 ಕೆಜಿ ಅಕ್ಕಿಯ ಬದಲಿಗೆ 5 ಕೆಜಿ ಅಕ್ಕಿ, ಇನ್ನುಳಿದ 5 ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಡಿಸಿಎಂ ಡಿಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಸಿವುಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಮುಖ್ಯ ಉದ್ದೇಶ. ಆದ್ದರಿಂದ ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾ ಕಿಟ್ ವಿತರಿಸಲು ನಮ್ಮ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಅನ್ನಭಾಗ್ಯದ 10 ಕೆಜಿ ಅಕ್ಕಿಯ ಬದಲು ಇನ್ಮುಂದೆ 5 ಕೆಜಿ ಅಕ್ಕಿ ಕೊಟ್ಟು, ಇನ್ನುಳಿದ 5 ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳಾದ ತೊಗರಿ ಬೇಳೆ – 1 ಕೆಜಿ, ಹೆಸರುಕಾಳು- 1 ಕೆಜಿ, ಅಡುಗೆ ಎಣ್ಣೆ – 1 ಲೀಟರ್, ಸಕ್ಕರೆ – 1 ಕೆಜಿ ಹಾಗೂ ಉಪ್ಪು- 1 ಕೆಜಿ ವಿತರಿಸಲಿದ್ದೇವೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದೇ ನಮ್ಮ ಸರ್ಕಾರದ ಕಾಳಜಿಯಾಗಿದೆ ಎಂದು ಹೇಳಿದ್ದಾರೆ.













