(ನ್ಯೂಸ್ ಕಡಬ) newskadaba.com, ಸೆ.06 ವಾಷಿಂಗ್ಟನ್: ಭಾರತ ನಮ್ಮ ಕೈ ತಪ್ಪಿಲ್ಲ, ನಮ್ಮ ನಡುವೆ ವಿಶೇಷ ಸಂಬಂಧವಿದೆ. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್ ಅವರು, ನಾವು ಭಾರತ ಮತ್ತು ರಷ್ಯಾವನ್ನು ಕರಾಳ ಚೀನಾದಿಂದಾಗಿ ಕಳೆದುಕೊಂಡಂತೆ ಕಾಣುತ್ತಿದೆ. ಅವರಿಗೆ ಸುದೀರ್ಘ ಹಾಗೂ ಸಮೃದ್ಧ ಭವಿಷ್ಯ ಸಿಗುವಂತಾಗಲಿ ಎಂದು ಹೇಳಿದ್ದರು.
ಇದರ ಜತೆಗೆ ಅವರು ಇತ್ತೀಚೆಗೆ ನಡೆದ ಶಾಂಫ್ಟ್ ಕೋ ಆಪರೇಷನ್ ಆರ್ಗನೈಸೇಷನ್ (ಎಸ್‌ಒ) ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷವಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದರ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಮೂಲಕ ಮೂರೂ ದೇಶಗಳ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
ಈ ನಡುವೆ ಶ್ವೇತಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಟ್ರಂಪ್ ಅವರು, ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.










