ಹೊಚ್ಚ ಹೊಸ ವಿಂಗರ್ ಪ್ಲಸ್‌ ಅನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್



(ನ್ಯೂಸ್‌ ಕಡಬ) newskadaba.com,  ಸೆ.03ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಆಗಿರುವ ಟಾಟಾ ಮೋಟಾರ್ಸ್, ಇದೀಗ ಹೊಚ್ಚ ಹೊಸ 9 ಆಸನಗಳ ಟಾಟಾ ವಿಂಗರ್ ಪ್ಲಸ್‌ ಅನ್ನು ಬಿಡುಗಡೆ ಮಾಡಿದೆ. ಇದು ಸಿಬ್ಬಂದಿ ಸಾರಿಗೆ ವ್ಯವಸ್ಥೆಗೆ ಮತ್ತು ಬೆ ವಿಂಗರ್ ಪ್ಲಸ್ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಮತ್ತು ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡುತ್ತದೆ. ಜೊತೆಗೆ ವಾಹನ ಮಾಲೀಕರಿಗೆ ಕಡಿಮೆ ಮಾಲೀಕತ್ವ ವೆಚ್ಚ ಹೊಂದ ಲು ನೆರವಾಗಲಿದ್ದು, ಹೆಚ್ಚಿನ ದಕ್ಷತೆ ಮತ್ತು ಲಾಭದಾಯಕತೆಯನ್ನು ಹೊಂದಲು ಸಹಾಯ ಮಾಡುತ್ತದೆ. ಇದರ ಬೆಲೆ Rs. 20.60 ಲಕ್ಷ (ಎಕ್ಸ್- ಶೋರೂಮ್, ನವದೆಹಲಿ) ಆಗಿದ್ದು, ಈ ವಾಹನವು ತನ್ನ ವಿನ್ಯಾಸ, ಫೀಚರ್ ಗಳು ಮತ್ತು ತಂತ್ರಜ್ಞಾನದ ಸಂಯೋಜನೆಯಿಂದ ಈ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.







ವಿಂಗರ್ ಪ್ಲಸ್ ಈ ವಿಭಾಗದಲ್ಲಿಯೇ ಶ್ರೇಷ್ಠವಾದ ಫೀಚರ್ ಗಳನ್ನು ಹೊಂದಿದೆ. ಉದಾಹರಣೆಗೆ ರಿಕ್ಲೈನಿಂಗ್ ಕ್ಯಾಪ್ಟನ್ ಸೀಟ್ ಗಳು, ಸರಿಹೊಂದಿಸಬಹುದಾದ ಆರ್ಮ್‌ ರೆಸ್ಟ್‌ ಗಳು, ವೈಯಕ್ತಿಕ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್‌ ಗಳು, ಪ್ರತ್ಯೇಕ ಏಸಿ ವೆಂಟ್‌ ಗಳು ಮತ್ತು ಸಾಕಷ್ಟು ಕಾಲಿಡುವ ಜಾಗ ಹೀಗೆ ಸಾಕಷ್ಟು ಸೌಲಭ್ಯಗಳಿವೆ. ವಿಶಾಲವಾದ ಕ್ಯಾಬಿನ್ ಮತ್ತು ದೊಡ್ಡದಾದ ಸಾಮಾನು ಇಡುವ ವಿಭಾಗವು ದೀರ್ಘ ಪ್ರಯಾಣಕ್ಕೆ ಹೆಚ್ಚಿನ ಆರಾಮದಾಯಕತೆ ಒದಗಿಸುತ್ತದೆ.






error: Content is protected !!
Scroll to Top