ಉತ್ತರಾಖಂಡದಲ್ಲಿ ಮೇಘಸ್ಪೋಟ: ಹಲವರು ನಾಪತ್ತೆ ಶಂಕೆ



(ನ್ಯೂಸ್‌ ಕಡಬ) newskadaba.com, ಆ.23:‌‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಮೇಘಸ್ಪೋಟ ಸಂಭವಿಸಿದ ಪರಿಣಾಮ ಅನೇಕ ಮನೆಗಳು ಸರ್ವನಾಶವಾಗಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.





ಮುಂಜಾನೆ 1 ಗಂಟೆಯ ಸುಮಾರಿಗೆ ಮೇಘಸ್ಪೋಟ ಸಂಭವಿಸಿದೆ. ಅವಶೇಷಗಳಡಿ ಹುಡುಗಿಯೊಬ್ಬಳು ಸಿಲುಕಿಕೊಂಡಿದ್ದು, ಪೊಲೀಸ್ಮತ್ತು ಎಸ್ಡಿಆರ್ಎಫ್ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೇಘಸ್ಪೋಟದ ಪರಿಣಾಮ ಅನೇಕ ವಾಹನಗಳು ಹಾಗೂ ಅಂಗಡಿಗಳು ಕೂಡ ಜಲಸಮಾಧಿಯಾಗಿದೆ. ಮೇಘಸ್ಪೋಟದ ಪರಿಣಾಮ ಅವಶೇಷಗಳು ರಸ್ತೆಯಲ್ಲಿ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.






ಡೆಹ್ರಾಡೂನ್‌, ತೆಹ್ರಿ, ಪೌರಿ, ಚಮೋಲಿ, ಅಲ್ಮೋರಾ, ರುದ್ರಪ್ರಯಾಗ ಹಾಗೂ ನೈನಿತಾಲ್ಸೇರಿದಂತೆ ರಾಜ್ಯದಲ್ಲಿ ಗುಡುಗುಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ಅಲರ್ಟ್ಘೋಷಿಸಲಾಗಿದೆ. ಪಿಥೀರಗಡದಲ್ಲಿ ಭೂಕುಸಿತದ ಪರಿಣಾಮ ಥಾಲ್ಮುನ್ಸಾರಿ ಹಾಗೂ ಮುನ್ಸಾರಿಮಿಲಮ್ರಸ್ತೆಗಳು ಮುಚ್ಚಲ್ಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!
Scroll to Top