(ನ್ಯೂಸ್ ಕಡಬ) newskadaba.com,ಆ.18: ರಾಜ್ಯಾದ್ಯಂತ ಆಹಾರ ನೈರ್ಮಲ್ಯ ಕಾಪಾಡಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ದಾಳಿ ಆರಂಭಿಸಿದೆ. 1,849 ಹೋಟೆಲ್/ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದ್ದು, 2,400ಕ್ಕೂ ಹೆಚ್ಚು ಆಹಾರ ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಸಮುದಾಯಗಳ 629 ಹೋಟೆಲ್‌ಗಳು (1,860 ಮಾದರಿಗಳು) ಹಾಗೂ ಸಮಾಜ ಕಲ್ಯಾಣ ಇಲಾಖೆಯ 331 ಹೋಟೆಲ್‌ಗಳನ್ನು (556 ಮಾದರಿಗಳು) ತಪಾಸಣೆಗೊಳಪಡಿಸಲಾಗಿದೆ.186 ಬಸ್ ನಿಲ್ದಾಣಗಳ 889 ಆಹಾರ ಮಳಿಗೆಗಳಲ್ಲಿ ತಪಾಸಣೆ ನಡೆಸಿದ್ದು, ಅನೈರ್ಮಲ್ಯ ಕಂಡ 206 ಸಂಸ್ಥೆಗಳಿಗೆ ನೋಟಿಸ್ ನೀಡಿ ₹55,000 ದಂಡ ವಿಧಿಸಲಾಗಿದೆ.
ಮಂಗಳೂರಿನಲ್ಲಿ ಆನ್‌ಲೈನ್ ಮೂಲಕ ತರಿಸಿದ್ದ ಕೋಳಿ ಮಾಂಸ ಹಾಳಾಗಿದ್ದ ದೂರಿನ ಬೆನ್ನಲ್ಲೇ ಜಾಗತಿಕ ಫಾಸ್ಟ್ ಫುಡ್ ಮಳಿಗೆಯ ಗೋದಾಮಿಗೆ ಸೀಲ್ ಹಾಕಲಾಗಿತ್ತು. ಈ ಘಟನೆಯ ನಂತರವೇ ರಾಜ್ಯಾದ್ಯಂತ ಕಾರ್ಯಾಚರಣೆ ಚುರುಕುಗೊಂಡಿದೆ.
ದಾರಿತಪ್ಪಿಸುವ ಲೇಬಲ್ ಹಾಗೂ ಟ್ರೇಡ್‌ಮಾರ್ಕ್ ಉಲ್ಲಂಘನೆಗೆ ಸಂಬಂಧಿಸಿ ನೋಟಿಸ್ ಸ್ವೀಕರಿಸಿದ್ದ 6 ಆಹಾರ ಕಂಪನಿಗಳು ಸೂಕ್ತ ತಿದ್ದುಪಡಿ ಕ್ರಮ ಕೈಗೊಂಡಿವೆ ಎಂದು FSSAI ತಿಳಿಸಿದೆ.








