ಬೆಟ್ಟಿಂಗ್ ಆಪ್ ಪ್ರಕರಣ: ನಟ ರಾಣಾ ದಗ್ಗುಬಾಟಿ ಹೈದರಾಬಾದ್‌ನಲ್ಲಿ ಇಡಿ ಮುಂದೆ ಹಾಜರು



(ನ್ಯೂಸ್‌ ಕಡಬ) newskadaba.com, ಆ.11 : ತೆಲಂಗಾಣದಲ್ಲಿ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಹೈದರಾಬಾದ್‌ನ ಬಶೀರ್‌ಬಾಗ್ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.





ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ರಾಣಾ ವಿವಿಧ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆ ನೋಟೀಸ್ ನೀಡಿತ್ತು. ಈಗಾಗಲೇ ನಟರಾದ ವಿಜಯ್ ದೇವರಕೊಂಡ, ಪ್ರಕಾಶ್ ರಾಜ್ ಇಡಿ ವಿಚಾರಣೆಗೆ ಹಾಜರಾಗಿದ್ದರು.






ಇನ್ನೂ ನಟಿ ಮಂಚು ಲಕ್ಷ್ಮಿ ಆಗಸ್ಟ್ 13ಕ್ಕೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

error: Content is protected !!
Scroll to Top