ಧರ್ಮಸ್ಥಳ ಪ್ರಕರಣ- ವಕೀಲರ ತಂಡದಿಂದ ಸಿಎಂ ಭೇಟಿ ಎಸ್ಐಟಿ ರಚನೆಗೆ ಆಗ್ರಹ



(ನ್ಯೂಸ್ ಕಡಬ) newskadaba.com ಜು. 17. ರಾಜ್ಯಾದ್ಯಂತ ವ್ಯಾಪಕ ಸುದ್ದಿಯಾಗುತ್ತಿರುವ ಧರ್ಮಸ್ಥಳ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವಾಗಿ (ಎಸ್‌ಐಟಿ) ರಚಿಸುವಂತೆ ವಕೀಲರ ನಿಯೋಗ ಆಗ್ರಹಿಸಿದೆ.







ಸಿಎಂ ನಿವಾಸ ‘ಕಾವೇರಿ’ಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ತನಿಖೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ವಿಚಾರಣೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ದಾಖಲೆ ಮಾಡಬೇಕು ಎಂದು ಮನವಿ ಸಲ್ಲಿಸಿತು.






ಸಿಎಂ ಭೇಟಿಯಾಗಿ ಸಿ.ಎಸ್‌.ದ್ವಾರಕನಾಥ್, ಎಸ್‌.ಬಾಲನ್‌, ಉಮಾಪತಿ ಎಸ್‌. ಮೊದಲಾದವರು ಈ ಕುರಿತ ಪತ್ರವನ್ನು ನೀಡಿದರು.

error: Content is protected !!
Scroll to Top