ಮಣ್ಣಗುಂಡಿಯಲ್ಲಿ ಗುಡ್ಡಕುಸಿತ ಮಂಗಳೂರು- ಬೆಂಗಳೂರು ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಜು. 17. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75ರ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಗುರುವಾರದಂದು ಬೆಳಗ್ಗೆ ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದೆ.

 

ಸ್ಥಳದಲ್ಲಿ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

ಮಣ್ಣು ತೆಗೆಯುವ ಕಾರ್ಯವು ಮಧ್ಯಾಹ್ನದವರೆಗೆ ಮುಂದುವರಿಯಲಿದ್ದು, ಹೀಗಾಗಿ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಉಪ್ಪಿನಂಗಡಿ- ಕಡಬ ಮಾರ್ಗವಾಗಿ ಕೈಕಂಬ ಮೂಲಕ ಗುಂಡ್ಯ ಹೆದ್ದಾರಿಯನ್ನು ತಲುಪಬಹುದಾಗಿದೆ.

Scroll to Top