ಗ್ರಾಹಕರು ಅಡವಿಟ್ಟ ಚಿನ್ನ ಎಗರಿಸಿ 3.5 ಕೋಟಿ ಸಾಲ ಪಡೆದ ಸಹಕಾರ ಸಂಘದ ಮ್ಯಾನೇಜರ್‌!

crime, arrest, suspected


(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. ಗ್ರಾಹಕರು ಅಡವಿಟ್ಟಿದ್ದ 6.5 ಕೆಜಿ ಚಿನ್ನವನ್ನು ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದ  ಮ್ಯಾನೇಜರ್ ಓರ್ವರು ಮತ್ತೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿರುವ ಘಟನೆ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





 

ಪ್ರಮುಖ ಆರೋಪಿ ಸಹಕಾರಿ ಸಂಘದ ವ್ಯವಸ್ಥಾಪಕ ಪ್ರೀತೇಶ್ ಎಂದು ಗುರುತಿಸಲಾಗಿದೆ. ಹಾಗೂ ಇವರಿಗೆ ಸಹಾಯ ಮಾಡಿದ ಶೇಖ್ ಮೊಹಮ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.






 

ಮೂಲಗಳ ಪ್ರಕಾರ, ಆರೋಪಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಾನು ಕೆಲಸ ನಿರ್ವಹಿಸುತ್ತಿದ್ದ ಸೊಸೈಟಿಯ ಲಾಕರ್‌ನಿಂದ ಗ್ರಾಹಕರು ಅಡವಿಟ್ಟಿದ್ದ 6.5 ಕೆಜಿ ಚಿನ್ನವನ್ನು ಅಕ್ರಮವಾಗಿ ಹೊರತೆಗೆದಿದ್ದಾನೆ. ನಂತರ ತನ್ನ ಸಹಚರರ ಮೂಲಕ ಅದೇ ಆಭರಣಗಳನ್ನು ಶಕ್ತಿನಗರದ ಮತ್ತೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು 3.25 ಕೋಟಿ ರೂ. ಸಾಲ ಪಡೆದಿದ್ದಾನೆ ಎನ್ನಲಾಗಿದೆ.

ವಂಚನೆಯ ಸುದ್ದಿ ಗೊತ್ತಾಗುತ್ತಿದ್ದಂತೆ ಪ್ರೀತೇಶ್ ಬೆಂಗಳೂರಿಗೆ ಪರಾರಿಯಾಗಿ ನಂತರ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಬಳಿಕ ಪೊಲೀಸರು ಬಂಧನಕ್ಕಾಗಿ ಲುಕೌಟ್ ನೋಟಿಸ್‌ ಜಾರಿ ಮಾಡಿದ್ದರು. ಇದೀಗ ಪ್ರಮುಖ ಆರೋಪಿ ಪ್ರೀತೇಶ್ ವಿದೇಶದಿಂದ ಬಂದು ಮಂಗಳೂರಿನ ಕೋರ್ಟಿಗೆ ಶರಣಾಗಿದ್ದಾನೆ ಎಂಬ ಮಾಹಿತಿ ದೊರಕಿದ್ದು, ಆತನನ್ನು ಜೈಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.

 

error: Content is protected !!
Scroll to Top