ಕಡಬ: ಭೂಮಿ ಕೇಂದ್ರದಲ್ಲಿ 4 ದಿನಗಳ ಕಾಲ ಪಹಣಿ ಮತ್ತು ಎಂಆರ್ ವಿತರಣೆ ಸ್ಥಗಿತ



(ನ್ಯೂಸ್ ಕಡಬ) newskadaba.com ಕಡಬ, ಜೂ.30. ಭೂಮಿ‌ ತಂತ್ರಾಂಶದಲ್ಲಿ ಕಂದಾಯ ವರ್ಷವನ್ನು ಬದಲಾಯಿಸುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಭೂಮಿ ಕೇಂದ್ರದಲ್ಲಿ ಪಹಣಿ ಮತ್ತು ಎಂಆರ್ ವಿತರಣೆ ಸ್ಥಗಿತಗೊಳ್ಳಲಿದೆ.







ಜುಲೈ 01 ರಿಂದ ಜುಲೈ 04 ರ ವರೆಗೆ ಕಂದಾಯ ವರ್ಷ ಬದಲಾವಣೆ ಮತ್ತು ಮುಂಗಾರು ಅವಧಿಯ ಪಹಣಿ ಡಿಜಿಟಲ್ ಸಹಿ‌ ಮಾಡಲಿರುವ ಕಾರಣದಿಂದ ಭೂಮಿ ಕೇಂದ್ರದ ಕೆಲಸಗಳು ಸ್ಥಗಿತಗೊಳ್ಳುವ ಕಾರಣ ಈ ಅವಧಿಯಲ್ಲಿ ಸಾರ್ವಜನಿಕರು ಆನ್‌ಲೈನ್ ಮೂಲಕ ಪಹಣಿ ಪಡೆದುಕೊಳ್ಳುವಂತೆ ಕಡಬ ತಾಲೂಕು ತಹಶೀಲ್ದಾರರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.






error: Content is protected !!
Scroll to Top