ಶ್ರೀನಿವಾಸ ಪೋರ್ಟ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ



(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 30. ಅಂತರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ, ಶ್ರೀನಿವಾಸ ಪೋರ್ಟ್ ಆಸ್ಪತ್ರೆ, SIMSRC ನ ಸಹಯೋಗದೊಂದಿಗೆ ಜುಲೈ 1, 2025ರಂದು ತನ್ನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪಣಂಬೂರಿನ ಶ್ರೀನಿವಾಸ ಪೋರ್ಟ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲು ನಿರ್ಧರಿಸಿದೆ.







 

ಈ ಶಿಬಿರವು ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರಲಿದೆ.






 

ವೈದ್ಯರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದ ವೇಳೆ

ಬಿಪಿ ಮತ್ತು ಶುಗರ್ ತಪಾಸಣೆ, ಇಸಿಜಿ ಮತ್ತು ವೈದ್ಯರ ಸಲಹೆಗಳನ್ನು ಉಚಿತವಾಗಿ ನೀಡಲಾಗುವುದು.

ಈ ಶಿಬಿರದ ಮೂಲಕ ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆಯ ಮಹತ್ವವನ್ನು ಬೋಧಿಸಲಾಗುವುದು ಹಾಗೂ

ಸಮುದಾಯದ ಆರೋಗ್ಯದತ್ತ ಆಸ್ಪತ್ರೆಗೆ ಇರುವ ಬದ್ಧತೆಯನ್ನು ಪ್ರದರ್ಶಿಸಲಾಗುವುದು.

error: Content is protected !!
Scroll to Top