(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 30. ಎಸ್.ಸಿ.ಎಸ್ ಆಸ್ಪತ್ರೆ ಮಂಗಳೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಶನಿವಾರದಂದು ಆಸ್ಪತ್ರೆಯ ಸಭಾಂಗಣದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದಂತಹ ಡಾ.ಜೀವರಾಜ್ ಸೊರಕೆಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯವಿರುವ ರಕ್ತವನ್ನು ಪೂರೈಸುವ ಸದುದ್ದೇಶದಿಂದ ಈ ಶಿಬಿರವನ್ನು
ಹಮ್ಮಿಕೊಳಲಾಯಿತು. ರಕ್ತದಾನವು ಶೇಷ್ಠದಾನವಾಗಿದ್ದು, ಪ್ರತಿಯೊಬ್ಬರ ರಕ್ತದಾನವೂ ಸಹ ಹಲವರ ಜೀವವನ್ನು ಉಳಿಸಲು ಸಹಾಯಕವಾಗುತ್ತದೆ ಎಂಬ ದೃಢನಂಬಿಕೆಯಿಂದ ಆಸ್ಪತ್ರೆಯ ಸಿಬ್ಬಂದಿಗಳು, ಜಿಲ್ಲೆಯ ಆರಕ್ಷಕ ಸಿಬ್ಬಂದಿಗಳು ಸೇರಿದಂತೆ ಹಲವಾರು ಸ್ವಯಂಸೇವಕರುಗಳು ಈ ಶಿಬಿರದಲ್ಲಿ ಅತ್ಯಂತ ಉತ್ಸಾಹದಲ್ಲಿ ರಕ್ತದಾನ ಮಾಡುವುದರ ಮೂಲಕ ಮಾನವೀಯತೆಯ ಮಹತ್ವವನ್ನು ಮೆರೆದರು.
ರಕ್ತದಾನಿಗಳಿಂದ ಸಂಗ್ರಹಿಸಲಾದ ರಕ್ತವನ್ನು ರಕ್ತನಿಧಿ ಘಟಕಗಳು, ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ವಿವಿಧ ರೋಗಗಳಲ್ಲಿ ಬಳಲುತ್ತಿರುವ ಅನೇಕ ರೋಗಿಗಳ ಆರೋಗ್ಯ ಸಮಸ್ಯೆಗಳ ಸಂದರ್ಭಗಳಲ್ಲಿ ತುರ್ತು ಸಹಾಯಹಸ್ತವನ್ನು
ನೀಡುವುದರ ಮೂಲಕ ಸಹಕಾರಿಯಾಗಲಿದೆ ಎಂದು ಆಸ್ಪತೆಯ ವ್ಯವಸ್ಥಾಪಕ ನಿರ್ದೇಶಕರಾದಂತಹ ಡಾ.ಜೀವರಾಜ್ ಸೊರಕೆಯವರು ರಕ್ತದಾನದ ಮಹತ್ವವನ್ನು ಒತ್ತಿಹೇಳಿದರು.
ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದ ಸಮಸ್ತರಿಗೂ ಆಸ್ಪತ್ರೆಯ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಲಾಯಿತು.









