ಆಸ್ತಿಗಳಿಗೆ ಇ-ಸ್ವತ್ತು ವಿತರಣೆಗೆ ಮಾರ್ಗಸೂಚಿ ಪ್ರಕಟ



(ನ್ಯೂಸ್ ಕಡಬ) newskadaba.com ಜೂ. 21. ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಕುರಿತು ಕರಡು ನಿಯಾಮವಳಿ ಜೂನ್‌ ಅಂತ್ಯಕ್ಕೆ ಸಿದ್ಧವಾಗಲಿದ್ದು, ಜುಲೈ 2ನೇ ವಾರದಲ್ಲಿ ಅಂತಿಮ ನಿಯಮಾವಳಿ ಪೂರ್ಣಗೊಳಿಸಿ ನಂತರ ಇ-ಸ್ವತ್ತು ವಿತರಣೆಗೆ ಮಾರ್ಗಸೂಚಿ ಪ್ರಕಟಿಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.







 

ಈ ಕುರಿತು ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನದಲ್ಲಿ ಇ-ಸ್ವತ್ತು ವಿತರಣೆಗೆ ಅನುಕೂಲವಾಗುವ ರೀತಿಯಲ್ಲಿ 199-ಬಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಇದಕ್ಕೆ ಅನುಗುಣವಾಗಿ ಇ-ಸ್ವತ್ತು ವಿತರಣೆ ಸುಗಮ ಮಾಡಲು ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.






ಸಾರ್ವಜನಿಕ ಆಸ್ತಿಗಳು ಅಧಿಕೃತ ಆಗುವುದಲ್ಲದೇ ಗ್ರಾಮ ಪಂಚಾಯಿತಿಗಳ ಆದಾಯ ಹೆಚ್ಚಲಿದ್ದು, ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

error: Content is protected !!
Scroll to Top