ಕೆಲವೇ ನಿಮಿಷಗಳಲ್ಲಿ ಕೋಟ್ಯಾಧಿಪತಿಯಾದ ಪಿಯುಸಿ ವಿದ್ಯಾರ್ಥಿ ► ಹೇಗೆ ಅಂತೀರಾ…?

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಮಾ.23. ಕೆಲವೇ ಸಮಯಗಳಲ್ಲಿ ಪಿಯುಸಿ ವಿದ್ಯಾರ್ಥಿಯೋರ್ವ ಕೋಟ್ಯಾಧಿಪತಿಯಾಗಿದ್ದು, ಅದಾದ ನಂತರ ನಿಮಿಷಗಳ ಅಂತರದಲ್ಲಿ ತನ್ನ ವಶದಲ್ಲಿದ್ದ ಎಲ್ಲಾ ಹಣವನ್ನು ಕಳೆದುಕೊಂಡ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಉತ್ತರ ಪ್ರದೇಶದ ಬಾರಾಬಂಕಿ ಆವಾಸ್ ವಿಕಾಸ್ ಕಾಲನಿಯ ನಿವಾಸಿಯಾಗಿರುವ ಪಿ.ಯು.ಸಿ. ವಿದ್ಯಾರ್ಥಿ ಕೇಶವ್ ಶರ್ಮಾ ಎಂಬಾತನ ಭಾರತೀಯ ಸ್ಟೇಟ್ ಬ್ಯಾಂಕ್‌ನ ಉಳಿತಾಯ ಖಾತೆಗೆ ಬ್ಯಾಂಕಿನ ಸಿಬ್ಬಂದಿ ಆತನಿಗೆ ಗೊತ್ತಿಲ್ಲದಂತೆ 5,55,55,555 ರೂ. ಜಮಾ ಮಾಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಮಾಡಿದ್ದ ಯಡವಟ್ಟಿನಿಂದಾಗಿ ವಿದ್ಯಾರ್ಥಿ ಕೆಲ ಸಮಯದಲ್ಲೇ ತನ್ನೆಲ್ಲಾ ಹಣವನ್ನೂ ಕಳೆದುಕೊಂಡಿದ್ದಾನೆ. ಕೇಶವ್ ಖಾತೆಗೆ 5.5 ಕೋಟಿ ರೂ. ಹಣ ಜಮಾ ಆಗಿರುವ ಬಗ್ಗೆ ಆತನ ತಂದೆಯ ಮೊಬೈಲ್ ಗೆ ಮೆಸೇಜ್ ಬಂದಿದ್ದು, ಇದನ್ನು ಗಮನಿಸಿದ ಕೇಶವ್ ಶರ್ಮಾ ಹಾಗೂ ಆತನ ತಂದೆ ಗಾಬರಿಯಿಂದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ವಿಚಾರಿಸಿದರೂ ಸಿಬ್ಬಂದಿಗಳಿಂದ ಪೂರಕ ಸ್ಪಂದನೆ ವ್ಯಕ್ತವಾಗಿಲ್ಲ ಎನ್ನಲಾಗಿದೆ. ನಂತರದ ಕೆಲವೇ ಸಮಯಗಳಲ್ಲಿ ಕೇಶವ್ ಶರ್ಮಾ ಖಾತೆಯಲ್ಲಿದ್ದ ಹಣವನ್ನು ಬ್ಯಾಂಕ್ ಸಿಬ್ಬಂದಿ ವಾಪಸ್ ತೆಗೆದಿದ್ದಾರೆ. ಹಣ ವಾಪಸ್ ತೆಗೆಯುವ ಸಂದರ್ಭದಲ್ಲಿ ಕೇಶವ್ ಖಾತೆಯಲ್ಲಿ ಮೊದಲೇ ಇದ್ದ 1.50 ಲಕ್ಷ ರೂ. ಹಣವನ್ನೂ ತೆಗೆಯಲಾಗಿದೆ. ಕೇಶವ್ ಹಾಗೂ ಆತನ ತಂದೆ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದ್ದರಾದರೂ ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎನ್ನುವ ಆರೋಪ‌ ವ್ಯಕ್ತವಾಗಿದೆ.

Also Read  ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ➤ ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲ್, ಉಡುಪಿಯಿಂದ ಶೋಭಾ ಕರಂದ್ಲಾಜೆ ಕಣಕ್ಕೆ

error: Content is protected !!
Scroll to Top