(ನ್ಯೂಸ್ ಕಡಬ)newskadaba.com, ಅ. 12 ನವದೆಹಲಿ : ಪಿಎಂ ಇಂಟರ್ನ್‌ಶಿಪ್ ಯೋಜನೆ 2024 ಫಲಾನುಭವಿಗಳಿಗಾಗಿ ಅರ್ಜಿ ಕರೆಯಲಾಗಿದ್ದು, ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಎಂಸಿಎ ಅಕ್ಟೋಬರ್ 12, 2024 ರಂದು ಅರ್ಜಿ ಸ್ವೀಕರಿಸಲು ಆರಂಭಿಸುತ್ತಿದೆ.
ಇಂಟರ್ನ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪಿಎಂ ಇಂಟರ್ನ್ಶಿಪ್ ಯೋಜನೆಯ ಅಧಿಕೃತ ವೆಬ್ಸೈಟ್ pminternship.mca.gov.in ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಇಂದು ಸಂಜೆ 5 ಗಂಟೆಗೆ ಯುವ ನೋಂದಣಿ ಮತ್ತು ಪ್ರೊಫೈಲ್ ರಚನೆಗಾಗಿ ಪೋರ್ಟಲ್ ತೆರೆದಿರುತ್ತದೆ.ಯಾವುದೇ ನೋಂದಣಿ ಅಥವಾ ಅರ್ಜಿ ಶುಲ್ಕವಿಲ್ಲ ಎಂದು ಸೂಚನೆ ತಿಳಿಸಿದೆ.