ನಕ್ಸಲರ ಅಟ್ಟಹಾಸಕ್ಕೆ ಒಂಭತ್ತು ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮ ► ಇಬ್ಬರ ಸ್ಥಿತಿ ಚಿಂತಾಜನಕ

(ನ್ಯೂಸ್ ಕಡಬ) newskadaba.com ಛತ್ತೀಸ್ ಘಢ, ಮಾ.13. ರಾಷ್ಟ್ರೀಯ ಭದ್ರತಾ ಪಡೆಗಳು ಛತ್ತೀಸ್ ಘಡದಲ್ಲಿ 10 ನಕ್ಸಲರನ್ನು ಕೊಂದು ಹಾಕಿದ ಕೆಲವೇ ದಿನಗಳಲ್ಲಿ ನಕ್ಸಲರ ಅಟ್ಟಹಾಸ ಮಿತಿಮೀರಿದ್ದು, ಮಂಗಳವಾರದಂದು ನಕ್ಸಲರು ನಡೆಸಿದ ದಾಳಿಗೆ 8 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯ ಕಿಸ್ತಾರಾಂ ನಿಂದ ಪಲೋಡಿ ಕ್ಯಾಂಪ್ ಗೆ ತೆರಳುತ್ತಿದ್ದ ಸ್ಫೋಟಕ ಸಂರಕ್ಷಣಾ ವಾಹನ (ಎಂಪಿವಿ) ದ ಮೇಲೆ ದಾಳಿ ನಡೆಸಿದ್ದರಿಂದಾಗಿ ಒಂಭತ್ತು ಮಂದಿ ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದು, ಮೂವರು ಯೋಧರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಆರ್ಕೆಎಸ್ ತೋಮರ್, ಅಜಯ್ ಕುಮಾರ್ ಯಾದವ್, ಮನೋರಂಜನ್, ಜಿತೇಂದ್ರ ಸಿಂಗ್, ಶೋಭಿತ್ ಕುಮಾರ್ ಶರ್ಮಾ, ಲಕ್ಷ್ಮಣ್, ಮನೋಜ್ ಸಿಂಗ್, ಧರ್ಮೇಂದ್ರ ಸಿಂಗ್ ಹಾಗೂ ಚಂದ್ರ ಎಚ್.ಎಸ್. ಎಂದು‌ ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಮದನ್‌ ಕುಮಾರ್ ಹಾಗೂ ರಾಜೇಶ್ ಕುಮಾರ್ ಎಂಬವರನ್ನು ಉನ್ನತ ಮಟ್ಟದ ಚಿಕಿತ್ಸೆಗಾಗಿ ಜಗದಲ್ಪುರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಯಿಂದ ಡಿಸ್ಚಾರ್ಜ್

error: Content is protected !!
Scroll to Top