ಐಸಿಸಿ ಮಹಿಳಾ ಟಿ20 ವಿಶ್ವಕಪ್-2024 ; ಆ್ಯಂಥಮ್ ಸಾಂಗ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಸೆ. 25. ಮುಂಬರುವ ಅಕ್ಟೋಬರ್ ತಿಂಗಳ 3ನೇ ತಾರೀಕಿನಂದು ಯುಎಇ ನಲ್ಲಿ ಈ ಬಾರಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪ್ರಾರಂಭಗೊಳ್ಳಲಿದ್ದು, ಇದಕ್ಕಾಗಿ ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ನ್ನು ಬಿಡುಗಡೆ ಮಾಡಿದೆ.

‘ವಾಟ್ ಎವರ್ ಇಟ್ ಟೇಕ್ಸ್’ ಎನ್ನುವ ಸಾಹಿತ್ಯದೊಂದಿಗೆ ಆ್ಯಂಥಮ್ ಸಾಂಗ್ ಪ್ರಾರಂಭವಾಗಲಿದ್ದು, ಆಲ್-ಗರ್ಲ್ ಪಾಪ್ ಗ್ರೂಪ್ W.i.S.H ತಂಡವರು ಈ ಹಾಡನ್ನು ಹಾಡಿದ್ದಾರೆ. ಇನ್ನು ಈ ಹಾಡಿಗೆ ಮೈಕಿ ಮೆಕ್‌ಕ್ಲಿಯರಿ, ಪಾರ್ಥ್ ಪರೇಖ್ ಮತ್ತು W.i.S.H ಟೀಮ್ ಸಂಗೀತ ಸಂಯೋಜಿಸಿದೆ. ಈ ಆ್ಯಂಥಮ್ ಸಾಂಗ್ ಪಾಪ್ ಶೈಲಿಯಲ್ಲಿ ಮೂಡಿಬಂದಿದ್ದು, ಈಗಾಗಲೇ ವೈರಲ್ ಆಗಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ 10 ತಂಡಗಳನ್ನು ಎರಡು ಗ್ರೂಪ್‌ಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಇನ್ನು ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಝಿಲೆಂಡ್, ಪಾಕಿಸ್ತಾನ್, ಶ್ರೀಲಂಕಾ ತಂಡವಿದ್ದು, ‘ಬಿ’ ಗುಂಪಿನಲ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಸ್ಕಾಟ್ಲೆಂಡ್ ತಂಡಗಳಿರಲಿವೆ.

error: Content is protected !!

Join the Group

Join WhatsApp Group