(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 21. ಭಾರತವು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದ್ದು, ಐಶಾರಾಮಿ ಕಾರು ಕಂಪೆನಿಗಳು ಕೂಡ ಇಂದು ಭಾರತದತ್ತ ಮುಖ ಮಾಡುತ್ತಿವೆ. ಆದರೆ ಯಾವ ಶ್ರೀಮಂತ ಕಾರುಗಳಿಗೂ ಕೂಡ ನಮ್ಮ ಭಾರತದ ಈ ಒಂದು ಚಿಕ್ಕ ಕಾರಿನ ದಾಖಲೆ ಮುರಿಯಲು ಇದುವರೆಗೂ ಸಾಧ್ಯವಾಗಿಲ್ಲ.
ದೇಶದ ಹೆಸರಾಂತ ಮತ್ತು ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ಬಿಡುಗಡೆಗೊಳಿಸಿರುವ ಅದೊಂದು ಕಾರಿನ ದಾಖಲೆಯನ್ನು BMW, ಬೆಂಝ್ ಅಂತ ಐಷಾರಾಮಿ ಕಾರಿಗೂ ಇವತ್ತಿಗೂ ಹಿಂದಿಕ್ಕಲು ಸಾಧ್ಯವಾಗಿಲ್ಲ. ಅದರಲ್ಲೂ ಮಾರುತಿ ಸುಜುಕಿ ಆಲ್ಟೋ, 5 ಮಿಲಿಯನ್ ಯುನಿಟ್‌ಗಳ (50 ಲಕ್ಷ ಕಾರುಗಳ) ಮಾರಾಟದ ಮೈಲಿಗಲ್ಲನ್ನು ದಾಟಿದ ಭಾರತದ ಏಕೈಕ ಕಾರು ಎಂದು ನಿಮಗೆ ಗೊತ್ತಿದೆಯೇ.. 2000 ಇಸವಿಯಲ್ಲಿ ಬಿಡುಗಡೆಯಾದ ಜನಪ್ರಿಯ ಹ್ಯಾಚ್ ಬ್ಯಾಕ್ ಇಲ್ಲಿಯವರೆಗೆ ಸುಮಾರು 5.06 ಮಿಲಿಯನ್ ಯುನಿಟ್‌ಗಳ ಮಾರಾಟವನ್ನು ಕಂಡಿದ್ದು, ಈ ಮೂಲಕ ಮಾರುತಿ ಸುಜುಕಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಆಲ್ಟೋ(Alto) ಭಾರತದಲ್ಲಿ 50 ಲಕ್ಷ ಗ್ರಾಹಕರ ಮನೆ ಸೇರುವ ಮೂಲಕ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ.
ಇದು ಟಾಪ್-10 ಕಾರುಗಳ ಪಟ್ಟಿಯಲ್ಲಿ ಇಲ್ಲದಿದ್ದರೂ, ಪ್ರತಿ ತಿಂಗಳು 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಖರೀದಿಸುತ್ತಾರಂತೆ. ಇದು ಕಂಪನಿಯ ಎಂಟ್ರಿ ಲೆವೆಲ್ ಕಾರು ಕೂಡ ಹೌದು. ಇದು ದೇಶದ ಅತ್ಯಂತ ಅಗ್ಗದ ಕಾರು ಕೂಡ ಆಗಿದ್ದು, ಮೊದಲು ಟಾಟಾ ನ್ಯಾನೊ ಕಡಿಮೆ ದರದ ಕಾರೆಂಬ ಹಿರಿಮೆಗೆ ಪಾತ್ರವಾಗಿತ್ತು. ಆಲ್ಟೋ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 3.99 ಲಕ್ಷ ರೂ. ಮೊದಲ ಬಾರಿಗೆ ಕಾರು ಖರೀದಿಸುವವರ ಅಚ್ಚುಮೆಚ್ಚಿನ ಆಯ್ಕೆ ಇದಾಗಿದೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಆಲ್ಟೋಗೆ ಸಾಕಷ್ಟು ಬೇಡಿಕೆಯಿದೆ. ಉತ್ತಮ ಮೈಲೇಜ್ ದೊರಕುವ ಕಾರಣಕ್ಕೆ ಹೆಚ್ಚಿನ ಜನರು ಆಲ್ಟೋ ಕಾರು ಖರೀದಿಗೆ ಆದ್ಯತೆ ನೀಡುತ್ತಾರೆ. ಅಂದಹಾಗೆ ಬಡ ಕುಟುಂಬಗಳಿಂದ ಹಿಡಿದು ಮಧ್ಯಮ ವರ್ಗದವರೆಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹೆಚ್ಚಾಗಿ ಮಾರುತಿ ಆಲ್ಟೋ ಮಾರಾಟವಾಗುತ್ತದೆ. ಯಾವ ಮಟ್ಟಿಗೆ ಅಂದ್ರೆ ಇದು ಎಂದಿಗೂ ಮುರಿಯಲಾಗದ ದಾಖಲೆಯನ್ನು ನಿರ್ಮಿಸಿ ತನ್ನ ಹತ್ತಿರಕ್ಕೂ ಯಾವುದೇ ಬ್ರಾಂಡ್ ನಿಲ್ಲದಂತೆ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಒಟ್ಟಿನಲ್ಲಿ ಮಾರುತಿ ಸುಜುಕಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಪ್ರಾಬಲ್ಯ ಉಳಿಸಿಕೊಂಡು ಬಂದಿದೆ.