(ನ್ಯೂಸ್ ಕಡಬ) newskadaba.com ಮುಂಬೈ, ಮಾ.06. ತಾನು ವಿಚಿತ್ರವಾಗಿರುವ ಅಪರೂಪದ ರೋಗಕ್ಕೆ ತುತ್ತಾಗಿದ್ದು, ರೋಗ ನಿರ್ಧರಿಸಲು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದೇನೆ ಎಂದು ಸಿನೆಮಾ ನಟ ಇರ್ಫಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಇರ್ಫಾನ್ ಖಾನ್ ಜಾಂಡೀಸ್ (ಹಳದಿ ಕಾಮಾಲೆ) ರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಟ್ವೀಟ್ ಮಾಡಿರುವ ಇರ್ಫಾನ್ ಖಾನ್ ತನ್ನನ್ನು ಬಾಧಿಸಿರುವ ಖಾಯಿಲೆಯು ಕಾಮಾಲೆಯಲ್ಲ. ಅದೊಂದು ಅಪರೂಪದ ಕಾಯಿಲೆಯಾಗಿದ್ದು, ರೋಗ ನಿರ್ಧರಿಸಲು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದೇನೆ. ಆದರೆ ತಾನು ಧೈರ್ಯಗೆಡದೆ ಕುಟುಂಬ ವರ್ಗದವರು ಹಾಗೂ ಸ್ನೇಹಿತರ ಬೆಂಬಲದಿಂದ ಸಮಾಧಾನದಲ್ಲಿದ್ದೇನೆ. ಕೆಲವೇ ದಿನಗಳಲ್ಲಿ ಖಾಯಿಲೆಯ ವಿವರ ತಿಳಿಯಬಹುದಾಗಿದ್ದು, ಆಗ ಎಲ್ಲರಿಗೂ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.