ಇನ್ನುಮುಂದೆ ಅಂಡರ್- 19 ವನಿತೆಯರಿಗೂ ಟಿ20 ಏಷ್ಯಾಕಪ್- ಎಸಿಸಿ

(ನ್ಯೂಸ್ ಕಡಬ) newskadaba.com ಮಲೇಷ್ಯಾ, ಸೆ. 12. ಇನ್ನು ಮಹಿಳೆಯರಿಗೂ ಕೂಡಾ ಅಂಡರ್-19 ಟಿ20 ಏಷ್ಯಾಕಪ್ ಆಯೋಜಿಸುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್‌ ಶಾ ಘೋಷಿಸಿದ್ದಾರೆ. ಬುಧವಾರದಂದು ಮಲೇಶ್ಯಾದಲ್ಲಿ ನಡೆದ ನಡೆದ ಎಸಿಸಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿರುವುದಾಗಿ ತಿಳಿದುಬಂದಿದೆ.

ಏಷ್ಯಾದ ಮಹಿಳಾ ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಅವರಿಗೆ ಅಂಡ‌ರ್ -19 ಟೂರ್ನಿ ಮೂಲಕ ಉತ್ತಮ ವೇದಿಕೆ ಒದಗಿಸಿಕೊಡುತ್ತೇವೆ ಎಂದು ಶಾ ತಿಳಿಸಿದ್ದಾರೆ. ಪ್ರತಿ ಬಾರಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಅಂಡರ್-19 ಟಿ20 ಏಷ್ಯಾಕಪ್ ನಡೆಸಲು ಎಸಿಸಿ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

error: Content is protected !!

Join WhatsApp Group

WhatsApp Share