(ನ್ಯೂಸ್ ಕಡಬ) newskadaba.com ತಮಿಳುನಾಡು, ಸೆ. 05. ಲೈಂಗಿಕ ದೌರ್ಜನ್ಯಗಳಲ್ಲಿ ತಪ್ಪಿತಸ್ಥ ವ್ಯಕ್ತಿಗಳಿಗೆ ಚಲನಚಿತ್ರೋದ್ಯಮದಿಂದ 5 ವರ್ಷಗಳ ಕಾಲ ನಿಷೇಧವನ್ನು ವಿಧಿಸುವ ಕುರಿತು ದಕ್ಷಿಣ ಭಾರತೀಯ ಕಲಾವಿದರ ಸಂಘ (SIAA) ಮಹತ್ವದ ನಿರ್ಣಯವೊಂದನ್ನು ಲಿಂಗ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿ (GSICC) ಸಭೆಯಲ್ಲಿ ಅಂಗೀಕರಿಸಿರುವ ಕುರಿತು ಮಾಧ್ಯಮ ವರದಿ ಪ್ರಕಟಿಸಿದೆ.
ಅಲ್ಲದೇ ತಮಿಳು ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಿಗೆ GSICC ಎಲ್ಲಾ ಕಾನೂನು ನೆರವು ನೀಡಲಿದೆ ಎಂದು ನಿರ್ಣಯವು ಹೇಳಿದೆ.
ಈ ಪ್ರಕಾರ, ಸಂತ್ರಸ್ತರು ತಮ್ಮ ದೂರುಗಳನ್ನು ಈಗಾಗಲೇ ಮೀಸಲಿರಿಸಿದ ಫೋನ್ ಸಂಖ್ಯೆ ಅಥವಾ ಈಮೇಲ್ ಮೂಲಕ ಸಂಘಕ್ಕೆ ನೀಡಬಹುದು. ಇದಲ್ಲದೇ ಸಂತ್ರಸ್ತರು ತಮ್ಮ ದೂರುಗಳನ್ನು ನೇರವಾಗಿ ಮಾಧ್ಯಮದೊಂದಿಗೆ ಹಂಚಿಕೊಳ್ಳುವ ಮೊದಲು ಸಮಿತಿಯನ್ನು ಸಂಪರ್ಕಿಸುವಂತೆ ಸಮಿತಿಯು ಸಲಹೆಯನ್ನು ನೀಡಿದೆ. ಮಲಯಾಳಂ ಚಿತ್ರರಂಗದ ಬಳಿಕ ತಮಿಳು ಸಿನಿಮಾದಲ್ಲೂ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ತಮಿಳು ನಟ ಮತ್ತು ನಾಡಿಗರ್ ಸಂಗಮ್‌ನ ಪ್ರಧಾನ ಕಾರ್ಯದರ್ಶಿ ವಿಶಾಲ್, ಹೇಮಾ ಸಮಿತಿಯಂತೆಯೇ ಈ ಸಮಿತಿಯನ್ನು ಕೂಡಾ ರಚಿಸುವುದಾಗಿ ಹೇಳಿದ್ದಾರೆ.(ವರದಿ)