(ನ್ಯೂಸ್ ಕಡಬ) newskadaba.com ದುಬೈ, ಫೆ.27. ಶನಿವಾರ ತಡರಾತ್ರಿ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಭಾರತದ ಹಿರಿಯ ಬಹುಭಾಷಾ ನಟಿ ಶ್ರೀದೇವಿಯವರ ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.
ಪ್ರಕರಣದಲ್ಲಿನ ಹಲವು ಊಹಾಪೋಹಗಳಿಂದಾಗಿ ಮೃತದೇಹದ ರವಾನೆ ವಿಳಂಬವಾಗಿತ್ತು. ಆದರೆ ಮಂಗಳವಾರದಂದು ಸಂಜೆ ವೇಳೆಗೆ ಇದ್ದ ಅಡೆತಡೆಗಳೆಲ್ಲಾ ನಿವಾರಣೆಗೊಂಡಿದ್ದು, ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನ ಮುಂದುವರಿದಿದೆ. ಹೃದಯ ಸ್ಥಂಬನದಿಂದಾಗಿ ಮೃತಪಟ್ಟಿದ್ದಾರೆ ಎಂದು ಮೊದಲು ಹೇಳಲಾಗಿತ್ತಾದರೂ, ಆ ನಂತರ ಬಾತ್ ಟಬ್ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು. ಈ ನಡುವೆ ದುಬೈನ ಕಾನೂನು ತಜ್ಞರು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದ ಕಾರಣ ಮೃತದೇಹದ ಹಸ್ತಾಂತರಕ್ಕೆ ವಿಳಂಬವಾಗಿತ್ತು. ಮಂಗಳವಾರ ಸಂಜೆ ವೇಳೆಗೆ ಅಡೆತಡೆಗಳು ನಿವಾರಣೆಗೊಂಡಿದ್ದು, ಅಂಬಾನಿಯವರ ವಿಶೇಷ ವಿಮಾನದಲ್ಲಿ ಮೃತದೇಹವನ್ನು ಭಾರತಕ್ಕೆ ತರಲಾಗುತ್ತಿದೆ.