(ನ್ಯೂಸ್ ಕಡಬ) newskadaba.com ಮುಂಬೈ, ಫೆ.26. ಭಾನುವಾರದಂದು ನಿಧನರಾದ ಭಾರತದ ಬಹುಭಾಷಾ ಹಿರಿಯ ನಟಿ ಶ್ರೀದೇವಿ ಮರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಊಹಾಪೋಹಗಳು ಕೇಳಿ ಬಂದಿದ್ದವಾದರೂ ಇದೀಗ ಬೆಚ್ಚಿ ಬೀಳಿಸುವ ವರದಿಯೊಂದು ಹೊರಬಿದ್ದಿದೆ.
ದುಬೈ ಪೊಲೀಸರು ನೀಡಿದ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಶ್ರೀದೇವಿಯವರು ಹೃದಯಾಘಾತದಿಂದ ಮರಣ ಹೊಂದಿದ್ದಲ್ಲ. ಬದಲಾಗಿ ಆಕಸ್ಮಿಕವಾಗಿ ಬಾತ್ ಟಬ್‍ನಲ್ಲಿ ಮುಳುಗಿದ್ದರಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಶ್ರೀದೇವಿಯ ರಕ್ತದಲ್ಲಿ ಆಲ್ಕೋಹಾಲ್ ಅಂಶವು ಕಂಡುಬಂದಿದ್ದು, ಆಲ್ಕೋಹಾಲ್ ಕುಡಿದು ಬಾತ್ ಟಬ್‍ನಲ್ಲಿರುವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಗಲ್ಫ್ ನ್ಯೂಸೊಂದು ವರದಿ ಮಾಡಿದೆ.