(ನ್ಯೂಸ್ ಕಡಬ) newskadaba.com ಆ. 26. ಪ್ರಸ್ತುತ ಆಧುನಿಕ ಯುಗದಲ್ಲಿ ಗೂಗಲ್ ಎಂಬುವುದು ಪ್ರತಿಯೊಬ್ಬನಿಗೂ ಆಪ್ತ ಗೆಳೆಯ ಅಂದರೆ ತಪ್ಪಾಗಲಾರದು. ಯಾವುದೇ ವಿಷಯದಲ್ಲಿ ಗೊಂದಲ ಇದ್ದಲ್ಲಿ ಜೆಸ್ಟ್ ಗೂಗಲ್ (Google) ಸಹಾಯ ಕೇಳಿದರೆ ಸಾಕು. ಪಟ್ ಅಂತ ಉತ್ತರ ನೀಡುತ್ತೆ. ಹೌದು, ಗೂಗಲ್ ಸರ್ಚ್ ನಿಜಕ್ಕೂ ಅಗತ್ಯ ಮಾಹಿತಿ ಒದಗಿಸುವ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೂಗಲ್ ಸರ್ಚ್‌ನಲ್ಲಿ ಕಾಣಿಸುವ ಫಲಿತಾಂಶಗಳು ವೆರಿಫೈಡ್ ಆಗಿರುತ್ತವೆ. ಆದರೆ ಕೆಲ ಮಾಹಿತಿಗಳು ವೆರಿಫೈಡ್ ಆಗಿರುವುದಿಲ್ಲ.
ತಜ್ಞರ ಪ್ರಕಾರ, ಗೂಗಲ್ ನ ಗೌಪ್ಯತೆ, ಐಟಿ ನಿಯಮಗಳು ಮತ್ತು ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಸಾರ್ವಜನಿಕ ಡೊಮೇನ್ ಗಳಲ್ಲಿ ಹುಡುಕಬಾರದು ಅಥವಾ ನಿಷೇಧಿಸಲ್ಪಟ್ಟ ಮೂರು ಪ್ರಮುಖ ವಿಷಯಗಳಿವೆ. ಇವುಗಳನ್ನು ತಪ್ಪಾಗಿ ಹುಡುಕಿದರೆ, ಅದು ಅಪರಾಧವಾಗುತ್ತದೆ ಮತ್ತು ಅವರು ಜೈಲಿಗೆ ಹೋಗಬೇಕಾದೀತು ಎಂದು ಹೇಳುತ್ತಾರೆ. ಅವು ಯಾವುವು ಎಂದು ನೋಡೋಣ. ಐಟಿ ನಿಯಮಗಳ ಪ್ರಕಾರ ಗೂಗಲ್ ನಲ್ಲಿ ಅಶ್ಲೀಲ ಸಂಗತಿ, ಸಾಹಿತ್ಯ, ವೀಡಿಯೊಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಷಯವನ್ನು ಹುಡುಕುವುದು ಅಪರಾಧ. ನೀವು ಅನಗತ್ಯ ವಿಷಯ ಹುಡುಕಿದರೆ, ನಿಮಗೆ 5 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಗೌಪ್ಯತೆ ನೀತಿಯ ಭಾಗವಾಗಿ, ಗೂಗಲ್ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಮತ್ತು ಬಾಂಬ್ ತಯಾರಿಸುವ ಮಾರ್ಗಗಳನ್ನು, ಹುಡುಕಬಾರದು. ಹಾಗಿದ್ದಲ್ಲಿ, ಗೂಗಲ್ ತಕ್ಷಣವೇ ಕಾನೂನು ಕ್ರಮಕ್ಕಾಗಿ ಸರ್ಕಾರಗಳಿಗೆ ಶಿಫಾರಸು ಮಾಡುತ್ತದೆ. ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಅಂತೆಯೇ, ಗೂಗಲ್ ನಲ್ಲಿ ಸರ್ಚ್ ಹ್ಯಾಕಿಂಗ್ ವಿಧಾನಗಳ ಬಗ್ಗೆ ಹುಡುಕುವುದು ಸಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕಾನೂನಿನ ಪ್ರಕಾರ ಜೈಲಿಗೆ ಹೋಗಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.