ಶಿಖರ್ ಧವನ್ ವಿದಾಯ- ಕೊಹ್ಲಿ ಭಾವನಾತ್ಮಕ ಸಂದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 26. ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿರುವ ಟೀಮ್‌ ಇಂಡಿಯಾ ಆಟಗಾರ ಹಾಗೂ ಗೆಳೆಯ ಶಿಖರ್‌ ಧವನ್‌ಗಾಗಿ ವಿರಾಟ್‌ ಕೊಹ್ಲಿ ಭಾವನಾತಕ ಸಂದೇಶ ಕಳುಹಿಸಿದ್ದು, ಭಾರತೀಯ ಕ್ರಿಕೆಟ್‌ ಜಗತ್ತಿನಲ್ಲಿ ನಿಮ ಪರಂಪರೆ ಶಾಶ್ವತ ಎಂದು ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಅವರು ಬಾಲ್ಯದಿಂದಲೂ ಒಟ್ಟಿಗೆ ಕ್ರಿಕೆಟ್‌ ಮೈದಾನದಲ್ಲಿ ಕ್ರೀಸ್‌‍ ಹಂಚಿಕೊಂಡಿದ್ದರೆ, ಕೊಹ್ಲಿ ಅವರ ನಾಯಕತ್ವದಲ್ಲೇ ಧವನ್‌ ಅವರು ತಮ್ಮ ಕ್ರಿಕೆಟ್‌ ಜೀವನದ ಅಂತಿಮ ಪಂದ್ಯವಾಡಿದ್ದರು.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಿಯ ಗೆಳೆಯನಿಗೆ ಸಂದೇಶ ಕಳುಹಿಸಿರುವ ವಿರಾಟ್‌ ಕೊಹ್ಲಿ, ‘ಶಿಖರ್‌ ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದಾಗಿನಿಂದಲೂ ಭಯಮುಕ್ತ ಪ್ರದರ್ಶನ ನೀಡಿದ್ದರಿಂದ ನೀವು ಭಾರತ ತಂಡದ ಅತ್ಯಂತ ಪ್ರಭಾವಕಾರಿ ಆರಂಭಿಕ ಆಟಗಾರರಾಗಿ ಗುರುತಿಸಿಕೊಂಡಿದ್ದೀರಿ, ನೀವು ನಮನ್ನು ಉತ್ತೇಜಿಸಲು ಹಲವು ಸರಣಿಯ ಪ್ರದರ್ಶನ ನೀಡಿದ್ದೀರಿ, ಇನ್ನು ಮುಂದೆ ನಾವು ನಿಮ್ಮ ತಾಳ್ಮೆ, ಕ್ರೀಡಾ ಮನೋಭಾವ ಹಾಗೂ ನಿಮ ವ್ಯಕ್ತಿತ್ವ ಬಿಂಬಿಸುತ್ತಿದ್ದ ನಗುವನ್ನು ಕಳೆದುಕೊಳ್ಳಲಿದ್ದೇವೆ. ಆದರೆ ನಿಮ ಪರಂಪರೆ ಶಾಶ್ವತವಾಗಿರುತ್ತದೆ. ನಿಮ ಅನೇಕ ಸರಣಿಯ ಪ್ರದರ್ಶನ ಹಾಗೂ ನೆನಪುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತವೆ.ಆಫ್‌ಫೀಲ್ಡ್ ನ ನಿಮ ಮುಂದಿನ ಜೀವನಕ್ಕೆ ಶುಭವಾಗಲಿ ಗಬ್ಬರ್‌’ ಎಂದು ಕೊಹ್ಲಿ ತಮ ಎಕ್ಸ್ ಗೋಡೆ ಮೇಲೆ ಬರೆದುಕೊಂಡಿದ್ದಾರೆ.

Also Read  ಈ ರಾಶಿಯವರನ್ನು ನೀವು ಮದುವೆಯಾದರೆ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆ ಬರುವುದಿಲ್ಲ

2010ರಿಂದ ಭಾರತ ತಂಡದ ಪ್ರಮುಖ ಆಟಗಾರರಾಗಿರುವ ಶಿಖರ್‌ ಧವನ್‌ ಹಾಗೂ ವಿರಾಟ್‌ಕೊಹ್ಲಿ ಅವರು ತಂಡಕ್ಕೆ ಹಲವು ಸರಣೀಯ ಗೆಲುವು ತಂದುಕೊಟ್ಟಿದ್ದಾರೆ. ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಬ್ಯಾಟ್ ಬೀಸುತ್ತಿದ್ದ ಈ ಜೋಡಿಯು 221 ಪಂದ್ಯಗಳಲ್ಲಿ 20,780 ರನ್‌ಗಳನ್ನು ಕಲೆಹಾಕಿದ್ದಾರೆ.

Also Read  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ ➤ ಸಂಪ್ರದಾಯದಂತೆ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ

error: Content is protected !!
Scroll to Top