ದಿನ ಬೆಳಗಾಗೋದ್ರಲ್ಲಿ ಸುದ್ದಿಗೆ ಬಂದ ಪ್ರಿಯಾ ವಾರಿಯರ್ ಅಭಿನಯದ ಹಾಡಿಗೆ ಕತ್ತರಿ ► ಹಾಡನ್ನು ಹಿಂಪಡೆಯುವುದಾಗಿ ಘೋಷಿಸಿದ ನಿರ್ದೇಶಕ

(ನ್ಯೂಸ್ ಕಡಬ) newskadaba.com ಕೇರಳ, ಫೆ.15. ಪಡ್ಡೆ ಹುಡುಗರ ನಿದ್ದೆಗೆಡಿಸಿ ದಿನ ಬೆಳಗಾಗೋದ್ರಲ್ಲಿ ಸುದ್ದಿಗೆ ಬಂದ ಚೆಂದುಳ್ಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿರುವ ಹಾಡಿನಲ್ಲಿ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಶಬ್ಧಗಳಿವೆ ಎಂದು ಹಾಡಿನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಹಾಡನ್ನು ಹಿಂಪಡೆಯುವುದಾಗಿ ನಿರ್ದೇಶಕ ಉಮರ್ ಲುಲು ಘೋಷಿಸಿದ್ದಾರೆ.

 

ಹಾಡಿನಲ್ಲಿರುವ ಕೆಲವು ಶಬ್ಧಗಳು ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಕೆಲವು ಯುವಕರು ಹಾಡಿನ ನಿರ್ಮಾಪಕರ ವಿರುದ್ಧ ಹೈದರಾಬಾದ್ ನ ಫಾರೂಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಾಡನ್ನು ಚಿತ್ರದಲ್ಲಿ ಬಳಸಲಾಗ್ತಿಲ್ಲ. ಹಾಡಿನ ಮರು ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನುವ ಸುದ್ದಿಯನ್ನು ಮಲಯಾಳಂ ಮಾಧ್ಯಮವೊಂದು ವರದಿ ಮಾಡಿದೆ. ‘ಮಾಣಿಕ್ಯ ಮಲರಾಯ ಪೂವಿ’ ಚಿತ್ರದ ಹಾಡಿನ ಮೂಲಕ ರಾತ್ರಿ ಬೆಳಗಾಗುವುದರ ಒಳಗೆ ವೈರಲ್ ನಟಿ ಪ್ರಿಯಾ ವೈರಲ್ ಸ್ಟಾರ್ ಆಗಿ ಮಿಂಚಿದ್ದರು‌.

Also Read  ದೇಶದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ ➤ ಇಂದು ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

error: Content is protected !!
Scroll to Top