(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 24. ಉದ್ಯೋಗ ಹುಡುಕುತ್ತಿರುವವರಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಂಸ್ಥೆಯು ಬರೋಬ್ಬರಿ 75,768 ಹುದ್ದೆಗಳನ್ನು ಘೋಷಿಸಿದೆ. ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರು ಈ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಇಂದಿನಿಂದ (ನವೆಂಬರ್ 24) ನೋಂದಣಿ ನಡೆಯಲಿದೆ. ಡಿಸೆಂಬರ್ 28 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF)- ಪುರುಷರು: 24,806, ಮಹಿಳೆಯರು: 3,069
ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ್- 7877 ಪುರುಷರು ಮತ್ತು721 ಮಹಿಳೆಯರು.
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್- 22,196 ಪುರುಷರು ಮತ್ತು 3,231 ಮಹಿಳೆಯರು.
ಶಸ್ತ್ರ ಸೀಮಾ ಬಲ್- ಪುರುಷರು: 4,839, ಮಹಿಳೆಯರು: 439
ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್- 2564 ಪುರುಷರು ಮತ್ತು 442 ಮಹಿಳೆಯರು.
ರೈಫಲ್‌ಮ್ಯಾನ್ (ಜನರಲ್ ಡ್ಯೂಟಿ) ಇನ್ ಅಸ್ಸಾಂ ರೈಫಲ್ಸ್ (AR)-ಪುರುಷರು: 4,624, ಮಹಿಳೆಯರು: 152
ಸೆಕ್ರಟ್ರಿಯೇಟ್ ಸೆಕ್ಯುರಿಟಿ ಫೋರ್ಸ್ (SSF)-ಪುರುಷರು: 458, ಮಹಿಳೆಯರು: 125
ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ-ಪುರುಷರು: 125.
ಹೀಗೆ ಪುರುಷರಿಗೆ 67,489 ಮತ್ತು ಮಹಿಳೆಯರಿಗೆ 8,179 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ /10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು: 18 ವರ್ಷ ಮತ್ತು ಗರಿಷ್ಠ ವಯಸ್ಸು: 23 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ / ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ನೆಟ್ ಬ್ಯಾಂಕಿಂಗ್, ಎಸ್‌ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬಹುದು.
ಆಯ್ಕೆ ವಿಧಾನ-
ಆನ್‌ಲೈನ್ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಮಾನದಂಡ ಪರೀಕ್ಷೆ (PST), ವೈದ್ಯಕೀಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.