ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ – ಖ್ಯಾತ ಹಾಸ್ಯನಟ ಅರೆಸ್ಟ್

(ನ್ಯೂಸ್ ಕಡಬ) newskadaba.com ಕೇರಳ, ಅ. 12. ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಖ್ಯಾತ ಮಲಯಾಳಂ ಹಾಸ್ಯನಟರೋರ್ವನನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.

ಬಂಧಿತನನ್ನು ಮಲಯಾಳಂ ಖ್ಯಾತ ಹಾಸ್ಯನಟ ಬಿನು ಬಿ ಕಮಲ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಕೆಎಸ್‌ಆರ್ ಟಿಸಿ ಬಸ್ ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 21 ವರ್ಷದ ಮಹಿಳೆಯೋರ್ವರು ನೀಡಿದ ದೂರಿನಂತೆ ನಟನನ್ನು ವಟ್ಟಪಾರಾ ಪೊಲೀಸರು ಬಂಧಿಸಿದ್ದಾರೆ. ನಟ ಬಿನು ಬಸ್ ನಲ್ಲಿ ಸಂತ್ರಸ್ತೆಯ ಪಕ್ಕದಲ್ಲಿ ಕುಳಿತು ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆ ಗಲಾಟೆ ಮಾಡಿದಾಗ, ವಟ್ಟಪಾರಾ ಜಂಕ್ಷನ್ ನಲ್ಲಿ ಬಸ್ ನಿಂತಿದ್ದು, ಬಿನು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭ ಪ್ರಯಾಣಿಕರು ಮತ್ತು ಸ್ಥಳೀಯರು ಆತನನ್ನು ಬೆನ್ನಟ್ಟಿದ್ದು, ಸದ್ಯ ಖ್ಯಾತ ನಟ-ಹಾಸ್ಯನಟ ಬಿನು ಬಿ ಕಮಲ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Also Read  ದಿಲ್ಲಿ: ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ಮೃತ್ಯು,13 ಮಂದಿಗೆ ಗಾಯ

error: Content is protected !!
Scroll to Top