(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ಇನ್ನು ಮುಂದೆ ಗೂಗಲ್, ಆಂಡ್ರಾಯ್ಡ್ ಫೋನ್ ಗಳಲ್ಲಿ ಜಿಮೇಲ್’ಗೆ “Select all” ಬಟನ್ ಅನ್ನು ಸೇರಿಸುತ್ತಿದ್ದು, ಸದ್ಯ ಕೊನೆಗೂ ಈ ಆಪ್ಷನ್ ಜಿಮೇಲ್ನಲ್ಲಿ ಲಭ್ಯವಾಗಲಿದೆ. ಈ Select all ಆಪ್ಷನ್ ಮೂಲಕ ಮೇಲ್ ನ ಇನ್ಬಾಕ್ಸ್ನಲ್ಲಿರುವ 50 ಮೇಲ್ಗಳನ್ನು ಏಕಕಾಲಕ್ಕೆ ಸೆಲೆಕ್ಟ್ ಮಾಡಿ ಎಲ್ಲವನ್ನೂ ಒಮ್ಮೆಲೇ ಡಿಲೀಟ್ ಮಾಡಬಹುದು.
ಕಳೆದ ಹಲವು ವರ್ಷಗಳಿಂದ ಈ ಆವೃತ್ತಿ ವೆಬ್ ವರ್ಷನ್ನಲ್ಲಿ ಲಭ್ಯವಿದ್ದು, ಆದರೆ ಆಂಡ್ರಾಯ್ಡ್ ನಲ್ಲಿ ಇರಲಿಲ್ಲ. ಆಂಡ್ರಾಯ್ಡ್ ಡಿವೈಸ್ ಮೂಲಕ ಜಿಮೇಲ್ ಗಳನ್ನು ಡಿಲೀಟ್ ಮಾಡಬೇಕಾದರೆ ಒಂದೊಂದೇ ಮೇಲ್ಗಳನ್ನು ಸೆಲೆಕ್ಟ್ ಮಾಡಬೇಕಿತ್ತು. ಇದು ತುಂಬಾ ಸಮಯ ಹಿಡಿಯುವ ಕೆಲಸವಾಗಿತ್ತು. ಸದ್ಯ 50 ಜಿಮೇಲ್ಗಳನ್ನು ಒಮ್ಮೆಲೇ ಸೆಲೆಕ್ಟ್ ಮಾಡುವ ಆಪ್ಷನ್ ಲಭ್ಯವಾಗುತ್ತಿರುವುದು ಬಳಕೆದಾರರಿಗೆ ಅನುಕೂಲವಾಗಲಿದೆ. ಜಿಮೇಲ್ ಅಕೌಂಟ್ ಫುಲ್ ಆದಾಗ ಅದರಲ್ಲಿನ ಮೇಲ್ಗಳನ್ನು ಡಿಲೀಟ್ ಮಾಡುವುದು ಅನಿವಾರ್ಯ. ಇಲ್ಲದಿದ್ದರೆ ನಿಮಗೆ ಹೊಸ ಮೇಲ್ಗಳು ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಅನೇಕ ಬಾರಿ ಮೊಬೈಲ್ ಮೂಲಕವೇ ಮೇಲ್ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೆ ಹೀಗೆ ಮಾಡುವಾಗ ಒಂದೊಂದೇ ಮೇಲ್ ಅನ್ನು ಪ್ರತ್ಯೇಕವಾಗಿ ಸೆಲೆಕ್ಟ್ ಮಾಡಬೇಕಿತ್ತು. ಈಗ ಹೊಸ ವೈಶಿಷ್ಟ್ಯ ಜಾರಿಯಾದ ನಂತರ ನೀವು ಒಮ್ಮೆಲೇ 50 ಮೇಲ್ಗಳನ್ನು ಸೆಲೆಕ್ಟ್ ಮಾಡಿಕೊಂಡು ಏಕಕಾಲಕ್ಕೆ ಅವುಗಳನ್ನು ಡಿಲೀಟ್ ಮಾಡಬಹುದು.