ಜಗತ್ತಿನ ‘ದಿ ಬೆಸ್ಟ್ ವಿಸ್ಕಿ’ ಬ್ರಾಂಡ್ ಗೆ ಆಯ್ಕೆಯಾದ ಭಾರತೀಯ “ಇಂದ್ರಿ”..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಸಾಂಪ್ರದಾಯಿಕವಾಗಿ ತನ್ನ ವೈವಿಧ್ಯ ಹಾಗೂ ಪರಂಪರಾಗತ ರುಚಿಗಾಗಿ ‘ಇಂದ್ರಿ’ ಎಂಬ ಹೆಸರಿನ ಭಾರತೀಯ ವಿಸ್ಕಿಯು ಇತ್ತೀಚಿಗೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೊಸ ದಾಖಲೆಗೆ ಹೆಸರುವಾಸಿಯಾಗಿದೆ.


‘ಇಂದ್ರಿ’ ಇತ್ತೀಚೆಗೆ ದೀಪಾವಳಿ ವಿಶೇಷ ಕಲೆಕ್ಟರ್ಸ್​ 2023ನೇ ಆವೃತ್ತಿಯಲ್ಲಿ ಪ್ರತಿಷ್ಠಿತ ‘ವಿಸ್ಕಿಸ್​ ಆಫ್​ ಧಿ ವರ್ಲ್ಡ್​​’ ಅವಾರ್ಡ್ಸ್‌ನಲ್ಲಿ ಉನ್ನತ ಗೌರವ ಪಡೆದುಕೊಂಡಿದೆ. ವಿಸ್ಕಿಸ್​​ ಆಫ್​ ದಿ ವರ್ಲ್ಡ್​​ ಅವಾರ್ಡ್ಸ್ ನಲ್ಲಿ ಬೆಸ್ಟ್​ ಇನ್​ ಶೋ ಡಬಲ್​ ಗೋಲ್ಡ್​ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. 2021 ರಲ್ಲಿ ಪ್ರಾರಂಭವಾದ ಈ ಬ್ರ್ಯಾಂಡ್ 14 ಕ್ಕೂ ಹೆಚ್ಚು ಅಂತರ್ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಇಂದಿನ ಆಧುನಿಕ ಮದ್ಯಪಾನ ಮಾರುಕಟ್ಟೆಯಲ್ಲಿ ವಿಸ್ಕಿ ಪ್ರಿಯರಿಗೆ ಭಾರತೀಯ ಬ್ರ್ಯಾಂಡ್​ಗಳು ಹೆಚ್ಚು ಪ್ರಯವಾಗುತ್ತಿದೆ. ಸಿಂಗಲ್​ ಮಾಲ್ಟ್​ ಮತ್ತು ಬ್ಲೆಂಡ್ಸ್​​ಗಳು ಹೀಗೇ ವಿಸ್ಕಿಯು ಹಲವು ಶ್ರೇಣಿಗಳನ್ನು ಹೊಂದಿದೆ. ಈ ವಿಸ್ಕಿ ಬ್ರ್ಯಾಂಡ್​ಗಳು ವಿಶಿಷ್ಟವಾದ ಪ್ರಾದೇಶಿಕ ಸುವಾಸನೆ ಹಾಗೂ ಅರೋಮ್ಯಾಟಿಕ್​ ಪ್ರೊಫೈಲ್​ಗಳನ್ನು ಹೊಂದಿವೆ.

Also Read 

error: Content is protected !!
Scroll to Top