ಏಷಿಯನ್ ಗೇಮ್ಸ್ 2023- ಭಾರತಕ್ಕೆ 2 ಬೆಳ್ಳಿ ಪದಕ

(ನ್ಯೂಸ್ ಕಡಬ) newskadaba.com ಹಾಂಗ್‌ಝೌ, ಸೆ. 24. ಚೀನಾದ ಹಾಂಗ್‌ಝೌ ನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ ನ ಮೊದಲ ದಿನ ಭಾರತದ ಕ್ರೀಡಾಪಟುಗಳು 2 ಬೆಳ್ಳಿ ಪದಕದೊಂದಿಗೆ ಶುಭಾರಂಭ ಮಾಡಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತ ಒಟ್ಟು 1886 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆಯಿತು. ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಅವರು 2023 ರ ಏಷ್ಯನ್ ಗೇಮ್ಸ್‌ ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ. ಪುರುಷರ ಲೈಟ್‌ ವೇಟ್ ಡಬಲ್ ಸ್ಕಲ್ಸ್‌ ನ ಫೈನಲ್ ನಲ್ಲಿ ಭಾರತದ ಅರ್ಜುನ್ ಜತ್ ಲಾಲ್ ಮತ್ತು ಅರವಿಂದ್ ಸಿಂಗ್ ಜೋಡಿಯು ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಅರ್ಜುನ್ ಲಾಲ್, ಅರವಿಂದ್ ಸಿಂಗ್ ಅವರೊಂದಿಗೆ ಶ್ಲಾಘನೀಯ ಪ್ರದರ್ಶನವನ್ನು ನೀಡಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.

Also Read  ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನ ಹತ್ಯೆ ➤ ಐದು ಮಂದಿ ಪೊಲೀಸರ ವಶಕ್ಕೆ

error: Content is protected !!
Scroll to Top