ನಂ.1 ಸ್ಥಾನಕ್ಕೇರಿದ ಭಾರತ

(ನ್ಯೂಸ್ ಕಡಬ) newskadaba.com ದುಬೈ, ಸೆ. 23. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿದ ನಂತರ ಭಾರತ ತಂಡ ಏಕದಿನ ಶ್ರೇಯಾಂಕದಲ್ಲಿ ನಂಬರ್-1 ಸ್ಥಾನಕ್ಕೆ ಏರಿದೆ. ಶುಕ್ರವಾರದಂದು ಆಸ್ಟ್ರೇಲಿಯಾ ವಿರುದ್ಧದ ಐದು ವಿಕೆಟ್‍ಗಳ ಜಯದ ನಂತರ, ಭಾರತ (116 ರೇಟಿಂಗ್ ಪಾಯಿಂಟ್‍ಗಳು) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (115) ಕೆಳಗಿಳಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದೆ.

ಈಗಾಗಲೇ ಟೆಸ್ಟ್ ಮತ್ತು ಟಿ -20 ಯಲ್ಲೂ ಅಗ್ರಸ್ಥಾನದಲ್ಲಿರುವ ಭಾರತ ತಂಡ ಈಗ ಎಲ್ಲಾ ಸ್ವರೂಪಗಳಲ್ಲಿ ಅಪತ್ಯ ಸಾಸಿದೆ. ಪುರುಷರ ಕ್ರಿಕೆಟ್ ಇತಿಹಾಸದಲ್ಲಿ ಇದು ಕೇವಲ ಎರಡನೇ ಬಾರಿಗೆ ಒಂದೇ ತಂಡವು ಎಲ್ಲಾ ಮಾದರಿಗಳಲ್ಲಿ ನಂ.1 ಶ್ರೇಯಾಂಕವನ್ನು ಸಾಸಿದೆ. ಇದಕ್ಕೂ ಮೊದಲು 2012ರ ಆಗಸ್ಟ್‍ ನಲ್ಲಿ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿತ್ತು.

Also Read  ಯೂಟ್ಯೂಬ್ ವಿಡಿಯೋ ಲೈಕ್ ಮಾಡಿ 24 ಲಕ್ಷ ರೂ. ಕಳೆದುಕೊಂಡ ಯುವತಿ..!

error: Content is protected !!
Scroll to Top