ICC’ಯಿಂದ U19 ವಿಶ್ವಕಪ್ 2024ರ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 22. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಇಂದು U19 ವಿಶ್ವಕಪ್ 2024ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಗ್ಗೆ ಎಕ್ಸ್ ನಲ್ಲಿ ಐಸಿಸಿ ಮಾಹಿತಿ ನೀಡಿದೆ. ಜನವರಿ 13 ರಿಂದ ಫೆಬ್ರವರಿ 4ರ ವರೆಗೆ ಶ್ರೀಲಂಕಾದಲ್ಲಿ ಪಂದ್ಯಾವಳಿ ನಡೆಯಲಿದ್ದು, ಐಸಿಸಿ ಅಂಡರ್ 19 ಪುರುಷರ ಕ್ರಿಕೆಟ್ ವಿಶ್ವಕಪ್ 2024 ಪಂದ್ಯಗಳನ್ನು ಬಹಿರಂಗಪಡಿಸಿದ್ದಾರೆ.


ಸ್ಪರ್ಧೆಯ 15 ನೇ ಆವೃತ್ತಿಯಲ್ಲಿ ಹದಿನಾರು ತಂಡಗಳು ಭಾಗವಹಿಸಲಿದ್ದು, ಕೆಲವು ಬದಲಾವಣೆಗಳೊಂದಿಗೆ 2006ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ ಆತಿಥ್ಯ ವಹಿಸುತ್ತಿದೆ. ಆತಿಥೇಯರು ಜನವರಿ 13ರಂದು ಜಿಂಬಾಬ್ವೆ ವಿರುದ್ಧ ಮುಖಾಮುಖಿಯೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಲಿದ್ದಾರೆ. ವೆಸ್ಟ್ ಇಂಡೀಸ್ ನಲ್ಲಿ 2022 ರ ಆವೃತ್ತಿಯನ್ನು ಗೆದ್ದ ಹಾಲಿ ಚಾಂಪಿಯನ್ ಭಾರತ, ಮರುದಿನ 2020 ರ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

Also Read  ಶಾಸಕ ಎಚ್ .ಕೆ ಪಾಟೀಲ್ ಅವರಿಗೆ ಕೋರೋನಾ ದೃಢ

error: Content is protected !!
Scroll to Top