ಚಿಪ್ಸ್ ಪ್ಯಾಕೆಟ್ ನಲ್ಲಿನ ಗೊಂಬೆಯನ್ನು ತಿಂದ ಮಗು ಉಸಿರುಗಟ್ಟಿ ಮೃತ್ಯು ► ಎಚ್ಚರ… ತಮ್ಮ ಮುದ್ದು ಕಂದಮ್ಮಗಳನ್ನು ಕೈಯಾರೆ ಬಲಿ ಕೊಡಬೇಡಿ

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಫೆ.07. ತಾಯಿ ತನ್ನ ಮುದ್ದಾದ ಮಗುವಿಗೆ ತಿನ್ನಲೆಂದು ಖರೀದಿಸಿದ ಚಿಪ್ಸ್ ಪ್ಯಾಕೆಟ್ ನಿಂದಾಗಿ ಮಗು ಜೀವ ಕಳೆದುಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

4 ವರ್ಷದ ಬಾಲಕ ತನ್ನ ತಾಯಿಯ ಜೊತೆ ಶಾಪಿಂಗ್ ಹೋಗಿದ್ದ ಸಂದರ್ಭ ಚಿಪ್ಸ್ ಬೇಕೆಂದು ಮಗನ ಹಠಕ್ಕೆ ಜೋತುಬಿದ್ದು ತಾಯಿ ಒಂದು ಚಿಪ್ಸ್ ಪ್ಯಾಕೆಟ್ ತೆಗೆದುಕೊಟ್ಟಿದ್ದಾಳೆ. ಮನೆಗೆ ಬಂಡ ಹುಡುಗ ತಾಯಿ ತೆಗೆಸಿಕೊಟ್ಟ ಚಿಪ್ಸ್ ಪ್ಯಾಕೆಟ್ ಓಪನ್ ಮಾಡಿ ಚಿಪ್ಸ್ ಜೊತೆ ಪ್ಯಾಕೆಟ್ ಒಳಗೆ ಇದ್ದ ರಬ್ಬರ್ ಗೊಂಬೆಯನ್ನ ಕೂಡ ತಿಂದಿದ್ದಾನೆ. ತಿಂದ ಕೆಲವೇ ಕ್ಷಣಗಳಲ್ಲಿ ಮಗು ಕೆಳಗೆ ಕುಸಿದಿದ್ದು, ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ವೈದ್ಯರು ಪರೀಕ್ಷಿಸುವಾಗ ಗೊಂಬೆಯನ್ನು ತಿಂದ ಕಾರಣ ಮಗು ಉಸಿರಾಡಲಾಗದೆ ಪ್ರಾಣ ಕಳೆದುಕೊಂಡಾಗಿತ್ತು.

Also Read  ಕಾಂಗ್ರೆಸ್ ಮುಖಂಡ ಡಿಕೆಶಿಗೆ ಜಾಮೀನು ➤ 50 ದಿನಗಳ ಜೈಲು ವಾಸಕ್ಕೆ ಕೊನೆಗೂ ಮುಕ್ತಿ

ಪೋಷಕರು ಪ್ರೀತಿಯಿಂದ ತನ್ನ ಮಕ್ಕಳಿಗೆ ತೆಗೆದುಕೊಡುವ ಕೆಲವೊಂದು ವಸ್ತುಗಳು ಅವರ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸನ್ನಿವೇಶ ಉಂಟಾಗುವುದಕ್ಕೆ ಮೊದಲು ಹೆತ್ತವರು ಎಚ್ಚರಗೊಳ್ಳುವುದು ಒಳಿತು‌.

error: Content is protected !!
Scroll to Top