‘ಬೀರಬಲ್’ ಖ್ಯಾತಿಯ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ವಿಧಿವಶ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 13. ‘ಬೀರಬಲ್’ ಖ್ಯಾತಿಯ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ(84) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1938ರಲ್ಲಿ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಜನಿಸಿದ ಸತೀಂದರ್ ಕುಮಾರ್ ಖೋಸ್ಲಾ ಅವರು, 1967ರಲ್ಲಿ ಉಪ್ಕಾರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆಗೈದು ಹಿಂದಿ ಚಿತ್ರರಂಗದ ಜೊತೆಗೆ ಪಂಜಾಬಿ, ಭೋಜ್‌ಪುರಿ ಮತ್ತು ಮರಾಠಿ ಸಿನಿಮಾ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಹಾಸ್ಯನಟನ ಸಾವಿಗೆ ಚಿತ್ರರಂಗ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

Also Read  ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ➤ ಶಾಸಕ ಕಮರುದ್ದೀನ್ ಬಂಧನ

error: Content is protected !!
Scroll to Top