ವಿಶ್ವ ಚೆಸ್‌ ಪಂದ್ಯ- ಭಾರತದ ಆರ್‌. ಪ್ರಜ್ಞಾನಂದಗೆ ಸೋಲು



(ನ್ಯೂಸ್ ಕಡಬ) newskadaba.com ಬಾಕು, . 24. ಗುರುವಾರದಂದು ನಡೆದ ವಿಶ್ವಕಪ್ ಚೆಸ್‌ ಪಂದ್ಯಾವಳಿಯ ಫೈನಲ್ ಟೈ ಬ್ರೇಕರ್‌ ಸ್ಪರ್ಧೆಯಲ್ಲಿ ಭಾರತದ ಆರ್‌. ಪ್ರಜ್ಞಾನಂದ ಎರಡೂ ಸುತ್ತಿನಲ್ಲೂ ಸೋಲು ಅನುಭವಿಸಿದ್ದು, ಮ್ಯಾಗ್ನಸ್‌ ಕಾರ್ಲ್ಸನ್‌ ವಿಶ್ವ ಕಪ್ ಗೆದ್ದಿದ್ದಾರೆ.





ಟೈ ಬ್ರೇಕರ್‌ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ‍್ಯಾಪಿಡ್ ಗೇಮ್‌ಗಳನ್ನು ಆಡಿದ್ದು, ಎರಡರಲ್ಲೂ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಭರವಸೆಯ ಪ್ರತಿಭೆ ಪ್ರಜ್ಞಾನಂದ ನಾರ್ವೇ ಚೆಸ್ ಮಾಸ್ಟರ್ ಎದುರು ಸೋತಿದ್ದಾರೆ. ಇನ್ನು ಮಂಗಳವಾರದಂದು ನಡೆದ ಮೊದಲ ಸುತ್ತು ಹಾಗೂ ಬುಧವಾರದ ದ್ವಿತೀಯ ಸುತ್ತಿನ ಫೈನಲ್‌ ಪಂದ್ಯ ಕೂಡ ಡ್ರಾ’ಗೊಂಡಿತ್ತು.






error: Content is protected !!
Scroll to Top