(ನ್ಯೂಸ್ ಕಡಬ) newskadaba.com ಬಾಕು, ಆ. 23. ಆರ್. ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವೆ ಅಝರ್ ಬೈಜಾನ್ನಲ್ಲಿ ನಡೆದ ಚೆಸ್ ವಿಶ್ವಕಪ್ ಫೈನಲ್ನ 2ನೇ ಗೇಮ್ ಕೂಡಾ ಡ್ರಾ’ನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದ ಮೊದಲ ಗೇಮ್ ಕೂಡ ಡ್ರಾ ಆಗಿತ್ತು.
ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡಾ ಸಮಬಲದೊಂದಿಗೆ ಅಂತ್ಯವಾಗಿದ್ದು, ಹೀಗಾಗಿ ಮುಂದೆ ನಡೆಯಲಿರುವ ಟೈ ಬ್ರೇಕರ್ ಪಂದ್ಯದ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಬುಧವಾರ ನಡೆದ 2ನೇ ಗೇಮ್ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್‌ಸೆನ್ ಜಾಣ ಚಲನೆಗೆ ಅತ್ಯುತ್ತಮ ಚೆಕ್ ನಡೆಗಳ ಮೂಲಕ ಪ್ರಜ್ಞಾನಂದ ಕೌಂಟರ್ ನೀಡಿದ್ದರು. ಪರಿಣಾಮ 22 ನಡೆಗಳ ನಂತರ ಕೂಡ ಪಂದ್ಯವು ಸಮತೋಲಿತವಾಗಿತ್ತು. ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಆಟಗಾರರು ಯಶಸ್ವಿಯಾದರು.