15 ವರ್ಷಗಳಿಗಿಂತ ಹಳೆಯ ವಾಹನಗಳು ಇನ್ಮುಂದೆ ಗುಜರಿಗೆ ► ಹಸಿರು ನ್ಯಾಯಾಧಿಕರಣದ ಆದೇಶವನ್ನು ಪಾಲಿಸಲು ಮುಂದಾದ ಕೇಂದ್ರ ಸರ್ಕಾರ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.06. ನೀವು 15 ವರ್ಷಗಳ ಹಿಂದಿನ ವಾಹನಗಳನ್ನು ಉಪಯೋಗಿಸುತ್ತಿದ್ದಲ್ಲಿ ಶೀಘ್ರದಲ್ಲೇ ಗುಜರಿಗೆ ಹಾಕಬೇಕಷ್ಟೇ. 2014 ರಲ್ಲಿ ಹಸಿರು ನ್ಯಾಯಾಧಿಕರಣ ಹೊರಡಿಸಿದ್ದ ಆದೇಶವನ್ನು ಪಾಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, 15 ವರ್ಷಗಳಿಗೂ ಹಳೆಯದಾದ 4 ಚಕ್ರ ಹಾಗೂ ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ.

ಇಂತಹದ್ದೊಂದು ನಿಯಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಜಾರಿಗೆ ಬರಲಿದ್ದು, ತದನಂತರ ದೇಶದೆಲ್ಲೆಡೆ ಜಾರಿಯಾಗುವ ಸಂಭವವಿದೆ. ಹಳೆಯ ವಾಹನವನ್ನು ಹೊಂದಿರುವವರು ಅದು ಸುಸ್ಥಿತಿಯಲ್ಲಿದ್ದರೂ ಗುಜರಿಗೆ ಹಾಕದೆ ಅನ್ಯ ಮಾರ್ಗವಿಲ್ಲದಂತಾಗಿದೆ. ರಸ್ತೆಯಲ್ಲಿ ಸಂಚರಿಸುವುದಿರಲಿ ಸಾರ್ವಜನಿಕ ಸ್ಥಳದಲ್ಲಿ ಪಾರ್ಕಿಂಗ್ ಮಾಡಲೂ ನಿಷೇಧವಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.

Also Read  ಕಾಸರಗೋಡು: ಬೈಕ್ ಗೆ ಶಾಲಾ ಬಸ್ ಢಿಕ್ಕಿ..! ➤  ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು           

error: Content is protected !!
Scroll to Top