ಪತಂಜಲಿ ಉತ್ಪನ್ನ ಖರೀದಿದಾರರಿಗೆ ಶುಭ ಸುದ್ದಿ ► ಪತಂಜಲಿ ಗ್ರಾಹಕರಿಗೆ ಸಿಗಲಿದೆ ‘ಆರೋಗ್ಯ ವಿಮೆ’ ಸೌಲಭ್ಯ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಫೆ.06. ಈಗಾಗಲೇ ದಿಗ್ಗಜ ಕಂಪನಿಗಳಿಗೆಲ್ಲಾ ಪೈಪೋಟಿ ನೀಡಿರುವ ಪತಂಜಲಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡಲು ಬಾಬಾ ರಾಮ್ ದೇವ್ ಮುಂದಾಗಿದ್ದಾರೆ.

ಬಳ್ಳಾರಿಯಲ್ಲಿ ಆಯೋಜಿಸಿರುವ ಯೋಗ ಶಿಬಿರದಲ್ಲಿ ಪಾಲ್ಗೊಂಡ ನಂತರ, ಬಳ್ಳಾರಿಯ ಪತಂಜಲಿ ಸ್ಟೋರ್ ಗೆ ಭೇಟಿ ನೀಡಿ ಮಾತನಾಡಿದ ಅವರು, ಪತಂಜಲಿ ಸ್ಟೋರ್ ಗಳಲ್ಲಿ 500 ರೂ. ಗಿಂತ ಹೆಚ್ಚಿನ ಮೊತ್ತದ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರಿಗೆ ಲೋಯಾಲ್ಟಿ ಕಾರ್ಡ್ ನೀಡಲಾಗುವುದು. ಅಪಘಾತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ., ಅಂಗವೈಕಲ್ಯರಾದಲ್ಲಿ 2.50 ಲಕ್ಷ ರೂ. ವಿಮೆ ಸೌಲಭ್ಯ ನೀಡಲಾಗುವುದು ಎಂದು ಹೇಳಿದ್ದಾರೆ. ವಿಮೆ ಸೌಲಭ್ಯ ನೀಡುವ ಯೋಜನೆ ಶೀಘ್ರವೇ ಜಾರಿಗೆ ಬರಲಿದ್ದು, ದೇಶದಲ್ಲಿನ ಎಲ್ಲಾ ಪತಂಜಲಿ ಸ್ಟೋರ್ ಗಳಲ್ಲಿ ಗ್ರಾಹಕರು ಕಾರ್ಡ್ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

Also Read  'ಮತ ಎಣಿಕೆಯಲ್ಲಿ ಅಕ್ರಮ ನಡೆದಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ'- ರಾಹುಲ್ ಗಾಂಧಿ

error: Content is protected !!
Scroll to Top