ವೇದಿಕೆ ಮೇಲೆ ಸೆರಗು ಬಿಚ್ಚಿದ ನಟಿ ನೇಹಾ ಶೆಟ್ಟಿ- ತರಾಟೆಗೆತ್ತಿಕೊಂಡ ನೆಟ್ಟಿಗರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.‌ 20. ನಟಿ ನೇಹಾ ಶೆಟ್ಟಿ ಅವರು ವೇದಿಕೆಯ ಮೇಲೆ ಸೀರೆ ಸೆರಗು ಬಿಚ್ಚುವ ಮೂಲಕ ಟ್ರೋಲ್ ಆಗಿದ್ದು, ನೇಹಾ ಅವರ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ನಟ ವಿಶ್ವಕ್ ಸೇನ್- ನೇಹಾ ಶೆಟ್ಟಿ ‘ಗ್ಯಾಂಗ್ಸ್ ಆಫ್ ಗೋದಾವರಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಪ್ರಚಾರದ ವೇಳೆ ಇಬ್ಬರೂ ಮಿತಿ ಮೀರಿ ನಡೆದುಕೊಂಡಿದ್ದಾರೆ. ಈ ಸಿನಿಮಾದ ಹಾಡಿಗೆ ಹುಕ್ ಸ್ಟೆಪ್ಸ್ ಸಹ ಇದ್ದು, ಇದಕ್ಕೆ ನೇಹಾ ಮತ್ತು ವಿಶ್ವಕ್ ವೇದಿಕೆ ಮೇಲೆಯೇ ಹೆಜ್ಜೆ ಹಾಕಿದ್ದು, ಈ ವೇಳೆ ನೇಹಾ ತಮ್ಮ ಸೀರೆಯ ಒಂದು ಎಳೆಯನ್ನು ಬಿಚ್ಚಿ ಹೀರೋ ವಿಶ್ವಕ್ ಮೇಲೆ ಹಾಕಿ ಹುಕ್ ಸ್ಟೆಪ್ಸ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Also Read  ಲೋಕಾಯುಕ್ತರ ಭೇಟಿ ➤ ದೂರು ಅರ್ಜಿ ಸ್ವೀಕಾರ

error: Content is protected !!
Scroll to Top