ಬಿಕಿನಿ ತೊಟ್ಟು ಸಮುದ್ರ ಮಧ್ಯೆ ಬೋಲ್ಡ್ ಆಗಿ ಕಾಣಿಸಿಕೊಂಡ ಕುಬ್ರಾ ಸೇಠ್

(ನ್ಯೂಸ್ ಕಡಬ) newskadaba.com ಮುಂಬೈ, ಆ. 20. ಸಿನಿಮಾ ರಂಗದಲ್ಲಿ ಸಖತ್ ಬೇಟಡಿಕೆಯಿರುವ ನಟಿ ಕುಬ್ರಾ ಸೇಠ್, ಸಿನಿಮಾ ಮಾತ್ರವಲ್ಲದೇ ವೆಬ್ ಸೀರಿಸ್​ ಲೋಕದಲ್ಲೂ ಕೂಡಾ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.


ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಕುಬ್ರಾ ಸೇಠ್, ತನ್ನ ಅಭಿಮಾನಿಗಳಿಗೆ ಆಗಾಗ ಹಲವು ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಇದೀಗ ಆಸ್ಟ್ರೇಲಿಯಾ ಟ್ರಿಪ್‌ ತೆರಳಿರುವ ಕುಬ್ರಾ, ತನ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಖತ್ ಹಾಟ್ ಅಂಡ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಸಮುದ್ರದ ಮಧ್ಯೆ ಬಿಕಿನಿ ತೊಟ್ಟು ಫೋಟೋ ಕ್ಲಿಕ್ಕಿಸಿಕೊಂಡ ಕುಬ್ರಾ ಸೇಠ್, ಸಮುದ್ರದಲ್ಲಿ ಕಂಡ ತಿಮಿಂಗಿಲವನ್ನು ನೋಡಿ ಖುಷಿಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

Also Read  ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಪಾಕ್‌ ಮಹಿಳೆ ಸೀಮಾ ಹೈದರ್

error: Content is protected !!
Scroll to Top