ವಿಶ್ವಕಪ್ ಗೆ ಅಧಿಕೃತ ಪಾಲುದಾರರಾಗಿ ಕೋಕಾ-ಕೋಲಾ

(ನ್ಯೂಸ್ ಕಡಬ) newskadaba.com ನವದೆಹಲಿ,ಜು. 31. ಈ ವರ್ಷ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ ಗೆ ತಂಡಗಳು ಮಾತ್ರವಲ್ಲದೇ ಪ್ರಪಂಚದಾದ್ಯಂತದ ಜನಪ್ರಿಯ ಬ್ರ್ಯಾಂಡ್‌ ಗಳು ಕೂಡ ಸಜ್ಜಾಗುತ್ತಿದ್ದು, ಇದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಅಧಿಕೃತ ತಂಪು ಪಾನೀಯದ ಪಾಲುದಾರನನ್ನು ಬಹಿರಂಗಪಡಿಸಲಾಗಿದೆ.

ವಿಶ್ವದ ಪ್ರಮುಖ ಕೋಲಾ ಕಂಪನಿಯಾದ ಕೋಕಾ-ಕೋಲಾವನ್ನು ಕ್ರಿಕೆಟ್ ವಿಶ್ವಕಪ್‌ ನ ಅಧಿಕೃತ ಪಾಲುದಾರರನ್ನಾಗಿ ಮಾಡಲಾಗಿದೆ. ಮುಂಬರುವ ಕ್ರಿಕೆಟ್ ವಿಶ್ವಕಪ್‌ಗೆ ಕೋಕಾ-ಕೋಲಾವನ್ನು ಅಧಿಕೃತ ತಂಪು ಪಾನೀಯ ಪಾಲುದಾರ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಘೋಷಿಸಿದೆ. ಈ ವರ್ಷದ ಅಕ್ಟೋಬರ್ 5ರಿಂದ ಭಾರತದಲ್ಲಿ ಕ್ರಿಕೆಟ್ ಮಹಾಕುಂಭ ಅಂದರೆ ವಿಶ್ವಕಪ್ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ ನಲ್ಲಿ ನಡೆಯಲಿದೆ.

Also Read  19.6 ಕೋಟಿ ರೂ. ಬಹುಮಾನ ಮುಡಿಗೇರಿಸಿಕೊಂಡ ಕಿವೀಸ್‌ ಮಹಿಳಾ ತಂಡ..!

error: Content is protected !!
Scroll to Top