ಚಂದ್ರಗ್ರಹಣ ದಿನದಂದೇ ದೆಹಲಿ ಸೇರಿದಂತೆ ಹಲವೆಡೆ ಭೂಕಂಪನ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.31. ಚಂದ್ರಗ್ರಹಣ ದಿನವಾದ ಬುಧವಾರದಂದು ದೆಹಲಿ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನವಾಗಿರುವ ಘಟನೆ ನಡೆದಿದೆ.

 

ಅಫ್ಘಾನಿಸ್ತಾನದ ಹಿಂದುಖುಷ್ ಪರ್ವತ ಪ್ರದೇಶದಲ್ಲಿ ಭೂ ಕಂಪನ ಉಂಟಾಗಿರುವುದರಿಂದ ಭಾರತದಲ್ಲೂ ಕಂಪನ ಉಂಟಾಗಿದೆ ಎನ್ನಲಾಗಿದೆ. ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದ್ದು, ಸುಮಾರು 12.42ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿರುವುದಾಗಿ ದೆಹಲಿ, ಜಮ್ಮುಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶ, ಹರ್ಯಾಣ, ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ.

Also Read  ಸಿಲಿಂಡರ್‌ ಬೆಲೆ ಇಳಿಕೆ

error: Content is protected !!
Scroll to Top