ಬಿಎಸ್ಸೆನ್ನೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ► ಉಚಿತ ಕರೆ ಕಡಿತಗೊಳಿಸಲು ಬಿಎಸ್ಸೆನ್ನೆಲ್ ಚಿಂತನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.29. ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಸಂಸ್ಥೆಯು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕಳೆದ ವರ್ಷ ಆಗಸ್ಟ್ 21 ರಿಂದ ಜಾರಿಗೆ ತಂದಿದ್ದ ಉಚಿತ ಕರೆ ಸೌಲಭ್ಯವನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ.

ಸ್ಥಿರ ದೂರವಾಣಿಗಳಿಗೆ ಭಾನುವಾರ ಉಚಿತ ಕರೆ ಸೌಲಭ್ಯವನ್ನು ನೀಡಲಾಗಿದ್ದು, ಅದನ್ನು ಫೆಬ್ರವರಿ 01 ರಿಂದ ಕಡಿತಗೊಳಿಸಲಾಗುವುದು. ಮೊದಲಿಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಉಚಿತ ಕರೆ ಸೌಲಭ್ಯವನ್ನು ನೀಡಲಾಗಿತ್ತು. ಆ ಸಮಯವನ್ನು ಇತ್ತೀಚೆಗೆ ಕಡಿತಗೊಳಿಸಿ ರಾತ್ರಿ 10.30 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿಗದಿ ಮಾಡಲಾಗಿತ್ತು. ಈಗ ಭಾನುವಾರದ ಉಚಿತ ಕರೆ ಸೌಲಭ್ಯವನ್ನೂ ಕೂಡ ವಾಪಸ್ ಪಡೆಯಲು ಬಿಎಸ್ಸೆನ್ನೆಲ್ ಮುಂದಾಗಿದೆ. ಉಚಿತ ಕರೆ ಸೌಲಭ್ಯವನ್ನು ಬಿಎಸ್ಸೆನ್ನೆಲ್ ಸ್ಥಗಿತಗೊಳಿಸುತ್ತಿರುವುದು ಗ್ರಾಹಕರಲ್ಲಿ ಬೇಸರವನ್ನು ತರಿಸಿದೆ. ಕೋಲ್ಕತ್ತ ವಲಯದ ಸ್ಥಿರ ದೂರವಾಣಿ ಗ್ರಾಹಕರಿಗೆ ಈ ಸೌಲಭ್ಯ ಮುಂದುವರೆಸಿ ಉಳಿದೆಡೆ ನೀಡಲಾಗಿದ್ದ ಉಚಿತ ಕರೆ ಸೌಲಭ್ಯವನ್ನು ಕಡಿತಗೊಳಿಸಲು ಬಿಎಸ್ಸೆನ್ನೆಲ್ ಮುಂದಾಗಿದೆ.

Also Read  ಅನಾರೋಗ್ಯದಿಂದ ರತನ್ ಟಾಟ ವಿಧಿವಶ : ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಸಂತಾಪ

error: Content is protected !!
Scroll to Top