(ನ್ಯೂಸ್ ಕಡಬ) newskadaba.com ನವದೆಹಲಿ, ಜು. 20. ಆದಾಯ ತೆರಿಗೆದಾರರಿಗೆ ಹಣಕಾಸು ಸಚಿವಾಲಯವು ಮಹತ್ವದ ಮಾಹಿತಿಯೊಂದನ್ನು ಹೊರಡಿಸಿದ್ದು, 2023ರ ಏಪ್ರಿಲ್-ಜುಲೈ ವರೆಗಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
ನಾಲ್ಕು ತಿಂಗಳ ಅವಧಿಯು ಏಪ್ರಿಲ್ 1 ರಂದು ಪ್ರಾರಂಭವಾಗಿ ಜುಲೈ 31 ರಂದು ಕೊನೆಗೊಳ್ಳುತ್ತದೆ. ಈ ನಿಗದಿತ ಸಮಯದೊಳಗೆ ಐಟಿಆರ್ ಅನ್ನು ಸಲ್ಲಿಸದಿದ್ದಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯಬಹುದು.
ಜುಲೈ 31 ರೊಳಗೆ ನೀವು ಐಟಿಆರ್ ಸಲ್ಲಿಸದಿದ್ದಲ್ಲಿ ಆಗಬಹುದಾದ ಪರಿಣಾಮಗಳು:-
ನಿಗದಿತ ಸಮಯವನ್ನು ತಪ್ಪಿಸಿಕೊಂಡ ತೆರಿಗೆದಾರರು ತಡವಾಗಿ ಐಟಿಆರ್ ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ. ತಡವಾಗಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ 2022-23ರ ಹಣಕಾಸು ವರ್ಷಕ್ಕೆ ಡಿಸೆಂಬರ್ 31 ಆಗಿದೆ. ತೆರಿಗೆದಾರರು ತಡವಾಗಿ ಐಟಿಆರ್ ಸಲ್ಲಿಸಿದರೆ, ವಿಳಂಬ ಫೈಲಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, ನೀವು ಜುಲೈ 31 ರ ನಂತರ ಐಟಿಆರ್ ಅನ್ನು ಸಲ್ಲಿಸಿದರೆ, ಡಿಸೆಂಬರ್ 31, 2023 ರ ಮೊದಲು, ನೀವು ಗರಿಷ್ಠ 5,000 ರೂ.ಗಳ ದಂಡವನ್ನು ಕಟ್ಟಬೇಕಾಗುತ್ತದೆ. ಒಟ್ಟು 5 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರು 1,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.