ಅಪಘಾತ ಸ್ಥಳದಲ್ಲಿ ಜಮಾಯಿಸಿದ್ದ ಜನರ ಮೇಲೆ ಹರಿದ ಕಾರು – ಪೊಲೀಸರ ಸಹಿತ 9 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಗುಜರಾತ್, ಜು. 20.‌ ಜನರ ಗುಂಪಿನ ನಡುವೆ ಕಾರು ಹರಿದು ಪೊಲೀಸ್‌ ಸಿಬ್ಬಂದಿಗಳ ಸಹಿತ 9 ಮಂದಿ ಮೃತಪಟ್ಟಿರುವ ಘಟನೆ ಅಹಮದಾಬಾದ್‌ನ ಇಸ್ಕಾನ್ ಸೇತುವೆ ಬಳಿ ನಡೆದಿದೆ.

ಸರ್ಖೇಜ್- ಗಾಂಧಿನಗರ (ಎಸ್‌ಜಿ) ಹೆದ್ದಾರಿಯಲ್ಲಿನ ಇಸ್ಕಾನ್ ಸೇತುವೆ ಬಳಿ ಥಾರ್ ಮತ್ತು ಟ್ರಕ್‌ ನಡುವೆ ತಡರಾತ್ರಿ ಅಪಘಾತ ಸಂಭವಿಸಿತ್ತು. ಈ ಅಪಘಾತವನ್ನು ನೋಡಲು ಪೊಲೀಸರು ಸೇರಿದಂತೆ ಹಲವರು ಜಮಾಯಿಸಿದ್ದರು.

ಇದೇ ವೇಳೆ ವೇಗವಾಗಿ ಬಂದ ಜಾಗ್ವಾರ್‌ ಕಾರೊಂದು ಅಪಘಾತದ ಸ್ಥಳದಲ್ಲಿ ನೆರದಿದ್ದ ಜನರ ಮೇಲೆ ಏಕಾಏಕಿ ಹರಿದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಗಳು ಸೇರಿದಂತೆ 9 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

Also Read  ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ..!

error: Content is protected !!
Scroll to Top