ಮನ್ ಕಿ ಬಾತ್ ನಲ್ಲಿ ಮೈಸೂರಿನ ಯುವಕನ ಅನುಭವ ಹಂಚಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.28. ಪ್ರಧಾನಿ ನರೇಂದ್ರ ಮೋದಿಯವರ 2018ನೇ ವರ್ಷದ ಮೊದಲ ಮನ್ ಕಿ ಬಾತ್ ಭಾನುವಾರದಂದು ನಡೆದಿದ್ದು, ಅದರಲ್ಲಿ ಮೈಸೂರಿನ ದರ್ಶನ್ ಎಂಬವರ ಅನುಭವವನ್ನು ಹಂಚಿಕೊಂಡಿದ್ದಾರೆ.

ತಿಂಗಳಿಗೆ ತಂದೆಯ ಔಷಧಿಗಾಗಿ 6 ಸಾವಿರ ರೂ. ಖರ್ಚು ಮಾಡುತ್ತಿದ್ದ ದರ್ಶನ್ ರವರು ಇದೀಗ ಜನೌಷಧಿ ಕೇಂದ್ರದಿಂದ ಖರೀದಿಸುವುದರ ಮೂಲಕ ಶೇ.75ರಷ್ಟು ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ಜನೌಷಧಿ ಕೇಂದ್ರದ ಬಗ್ಗೆ ದರ್ಶನ್ ಅನುಭವವನ್ನು ಪ್ರಧಾನಿ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಜನೌಷಧಿ ಕೇಂದ್ರದ ಲಾಭದ ಬಗ್ಗೆಯೂ ಕೂಡ ಮನ್​ ಕೀ ಬಾತ್​ನಲ್ಲಿ ಪ್ರಸ್ತಾಪಿಸಿದ್ದಾರೆ. 2017 ರ ಫೆಬ್ರವರಿಯಲ್ಲಿ ಮೈಸೂರಿನ ಸಂತೋಷ್ ಎಂಬವರು ತನಗೆ ಲಕ್ಕಿಡಿಪ್ ಮೂಲಕ ಸಿಕ್ಕಿದ್ದ ಹಣವನ್ನು ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡು ಗಾಯಗೊಂಡಿದ್ದ ವೃದ್ಧೆಯ ಸಹಾಯಕ್ಕೆ ನೆರವು ನೀಡಿದ್ದನ್ನು ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಶ್ಲಾಘಿಸಿದ್ದರು.

Also Read  ವಿಮಾನದಲ್ಲಿ ಗಗನಸಖಿಯ ಜೊತೆ ಅನುಚಿತ ವರ್ತನೆ..! ➤ ಪ್ರಯಾಣಿಕರ ವಿರುದ್ದ ದೂರು ದಾಖಲು

error: Content is protected !!
Scroll to Top