ದಕ್ಷಿಣ ಕನ್ನಡ ಆಪರ ಜಿಲ್ಲಾಧಿಕಾರಿಯಾಗಿ ಸಂತೋಷ್ ಕುಮಾರ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಡಾ. ಜಿ. ಸಂತೋಷ್ ಕುಮಾರ್ ಅವರು ಇಂದು ಅಧಿಕಾರ ವಹಿಸಿಕೊಂಡರು.

ಇದುವರೆಗೆ ಅಪರ‌ ಜಿಲ್ಲಾಧಿಕಾರಿಯಾಗಿದ್ದ ಮಾಣಿಕ್ಯ ಅವರು ಸಂತೋಷ್ ಕುಮಾರ್ ಅವರಿಗೆ ಶುಭಹಾರೈಸಿದರು. ಸಂತೋಷ್ ಕುಮಾರ್ ಅವರು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಉಪ ವಿಭಾಗಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Scroll to Top